ಮಂಗಳೂರು: ಮೊಬೈಲ್ ಹಾಗೂ ಪರ್ಸ್ ದೋಚಿ ಕಳ್ಳ ಪರಾರಿ..!

(ನ್ಯೂಸ್ ಕಡಬ) newskadabac.com ಮಂಗಳ, ಡಿ. 11. ಕಳ್ಳನೋರ್ವ ವ್ಯಕ್ತಿಯಲ್ಲಿದ್ದ ಪರ್ಸ್ ಹಾಗೂ ಮೊಬೈಲ್ ಅನ್ನಜ ಎಗರಿಸಿ ಪರಾರಿಯಾದ ಘಟನೆ ನಗರದ ಲಾಲ್ ಬಾಗ್ ವೃತ್ತದ ಬಳಿ ಶನಿವಾರದಂದು ಮಧ್ಯಾಹ್ನ ನಡೆದಿದೆ.

ಕಳ್ಳನನ್ನು ಸಾರ್ವಜನಿಕರು ಬಿಗ್ ಬಝಾರ್ ಕಡೆಯಿಂದ ಲಾಲ್ ಬಾಗ್ ವೃತ್ತದವರೆಗೆ ಬೆನ್ನಟ್ಟಿದರೂ ಹಿಡಿಯಲು ಸಾಧ್ಯವಾಗಿಲ್ಲ. ಬಿಳಿ ಶರ್ಟ್ ಧರಿಸಿದ್ದ ಈತನ ವಯಸ್ಸು ಸುಮಾರು 25ರಿಂದ 30 ಇರಬಹುದು, ಈತನ ಚಹರೆ ಲಾಲ್ ಬಾಗ್ ವೃತ್ತದ ಬಳಿಯಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರಬಹುದು ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Also Read  ಎಸ್ಸಿ/ಎಸ್ಟಿ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನ- ಅರ್ಜಿ ಆಹ್ವಾನ

 

error: Content is protected !!
Scroll to Top