ತಲೆ ನೋವಿನ ಪರಿಹಾರಕ್ಕಾಗಿ ತಲೆಗೆ ಹೊಡೆದ ಪೂಜಾರಿ ➤ ಮಹಿಳೆ ಮೃತ್ಯು..!

(ನ್ಯೂಸ್ ಕಡಬ) newskadaba.com ಹಾಸನ, ಡಿ. 11. ಪೂಜಾರಿಯೋರ್ವ ಪೂಜೆಯ ನೆಪದಲ್ಲಿ ಅನಾರೋಗ್ಯ ಪೀಡಿತ ಮಹಿಳೆಯ ತಲೆಗೆ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟ ಅಮಾನವೀಯ ಘಟನೆ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕಗ್ರಾಮದಲ್ಲಿ ನಡೆದಿದೆ.

ಮೃತರನ್ನು ಪಾರ್ವತಿ (47) ಎಂದು ಗುರುತಿಸಲಾಗಿದೆ. ಪಾರ್ವತಿ ಎಂಬವರು ತಲೆ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ಹೋಗಿಯೂ ಗುಣಮುಖರಾಗದ ಹಿನ್ನೆಲೆ ಗ್ರಾಮದ ಪಿರಿಯಾಪಟ್ಟಣದ ದೇವರ ಪೂಜಾರಿ ಮಧು ಎಂಬವರ ಬಳಿ ಕರೆದುಕೊಂಡು ಹೋಗಿದ್ದು, ತಲೆ ನೋವನ್ನು ಬೆತ್ತದಿಂದ ಸರಿಪಡಿಸುವುದಾಗಿ ಹೇಳಿದ ಪೂಜಾರಿ ಮಹಿಳೆಗೆ ಬೆತ್ತದಿಂದ ಹೊಡೆದಿದ್ದು, ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದ ಪಾರ್ವತಿಯವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಕುರಿತು ಶ್ರವಣಬೆಳಗೊಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಗೆ ಹೊಡೆದ ಒಂದೇ ಏಟಿಗೆ ಪಾರ್ವತಿಯವರು ತೀವ್ರ ಅಸ್ವಸ್ಥಗೊಂಡಿದ್ದು, ಈ ವೇಳೆ ನಿಂಬೆ ರಸ ಕುಡಿಸಿ ಖಾಯಿಲೆ ಗುಣವಾಗಿದೆ ಎಂದು ಹೇಳಿ ಕುಟುಂಬಸ್ಥರನ್ನು ಪೂಜಾರಿ ಕಳುಹಿಸಿದ್ದಾನೆ ಎಂದು ತಿಳಿದು ಬಂದಿದೆ.

Also Read  ಸುಳ್ಯ: ಜ್ಯುವೆಲ್ಲರಿ ಮಾರ್ಟ್ ಗೆ ನುಗ್ಗಿದ ಕಳ್ಳರು ➤ ಚಿನ್ನಾಭರಣ ಹಾಗೂ ನಗದು ಜೊತೆ ಸಿಸಿ ಕ್ಯಾಮರಾ ಹೊತ್ತೊಯ್ದರು

 

 

error: Content is protected !!
Scroll to Top