ಮಂಗಳೂರು: ಅನ್ಯಕೋಮಿನ ತಂಡದಿಂದ ವ್ಯಕ್ತಿಯ ಮೇಲೆ ತಲವಾರು ದಾಳಿ ➤ ವ್ಯಕ್ತಿ ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 11. ವ್ಯಕ್ತಿಯೋರ್ವರ ಮೇಲೆ ಭಜರಂಗದಳದ ಗುಂಪೊಂದು ತಲವಾರು ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ಬಿತ್ತು ಪಾದೆಪಡು ಎಂಬಲ್ಲಿ ನಡೆದಿದೆ.

ಗಾಯಗೊಂಡವರನ್ನು ಅಡ್ಯಾರ್ ಪದವು ನಿವಾಸಿ ಅಬ್ದುಲ್ ರಝಾಕ್ ಎಂದು ಗುರುತಿಸಲಾಗಿದೆ. ಜೀವನ್, ಕಿಶೋರ್, ಸುಜಿತ್, ಗಣೇಶ್ ಹಾಗೂ ತಂಡದಿಂದ ತ್ರಿಶೂಲ ದಾಳಿ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗಂಭೀರ ಗಾಯಗೊಂಡ ರಝಾಕ್ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

Scroll to Top