ಬೆಳ್ತಂಗಡಿ: ಈಜಲು ತೆರಳಿದ್ದ ಪಿಯುಸಿ ವಿದ್ಯಾರ್ಥಿ ನೀರುಪಾಲು…!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 10. ಈಜಲೆಂದು ನೀರಿಗಿಳಿದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಚಿಕ್ಕಮಗಳೂರು ಮೂಲದ ಸಮರ್ಥ್(18) ಎಂದು ಗುರುತಿಸಲಾಗಿದೆ. ಈತ ಮಧ್ಯಾಹ್ನದ ಬಳಿಕ ತರಗತಿ ಇದ್ದ ಕಾರಣ ಗೆಳೆಯನ ಜೊತೆ ಈಜಲು ತೆರಳಿದ್ದಾನೆ. ಗೆಳೆಯ ಮೇಲೆ ನಿಂತಿದ್ದು, ಆದರೆ ಸಮರ್ಥ್ ಮೊದಲೇ ನೀರಿಗಿಳಿದು ನಾಪತ್ತೆಯಾಗಿದ್ದಾನೆ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿ ಸ್ಥಳೀಯರನ್ನು ಕರೆದುಕೊಂಡು ಬಂದಿದ್ದು, ಬಳಿಕ ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ.

Also Read  ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಜಿಲ್ಲಾಧಿಕಾರಿ ಸೂಚನೆ

 

error: Content is protected !!
Scroll to Top