ಸತ್ತ ಹಸುಗಳನ್ನು ಟೋಯಿಂಗ್ ವಾಹನಕ್ಕೆ ಕಟ್ಟಿ ಅಮಾನವೀಯವಾಗಿ ಎಳೆದೊಯ್ದ ಐಆರ್ ಬಿ ಸಿಬ್ಬಂದಿ..! ➤ ಹಿಂದೂಪರ ಸಂಘಟನೆಗಳಿಂದ ವ್ಯಾಪಕ ಖಂಡನೆ

(ನ್ಯೂಸ್ ಕಡಬ) newskadaba.com ಬೈಂದೂರು, ಡಿ. 06. ಹೆದ್ದಾರಿಯಲ್ಲಿ ಮೃತಪಟ್ಟಿದ್ದ ಎರಡು ಹಸುಗಳನ್ನು ಐಆರ್ ಬಿ ಟೋಯಿಂಗ್ ವಾಹನಕ್ಕೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸತ್ತ ಹಸುಗಳನ್ನು ಎಳೆದೊಯ್ಯುತ್ತಿರುವ ದೃಶ್ಯವನ್ನು ಪ್ರವಾಸಿ ವಾಹನದವರು ಸೆರೆಹಿಡಿದು ಜಾಲತಾಣದಲ್ಲಿ ವೈರಲ್ ಮಾಡಿದ್ದು, ಈ ಹಿನ್ನೆಲೆ ಭಟ್ಕಳ ಸೇರಿದಂತೆ ಹಲವೆಡೆ ಹಿಂದೂಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಶಿರೂರು ಟೋಲ್ ಗೇಟ್ ಬಳಿ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕೇಳಿಬಂದಿದೆ.

Also Read  ಸೆ. 30ರಂದು ರಾಜ್ಯದಲ್ಲಿ 'ಭಾರತ್ ಜೋಡೋ' ➤‌ ದ.ಕ ಜಿಲ್ಲೆಯಿಂದ 20,000 ಜನ- ಟಿ.ಎಂ ಶಹೀದ್

 

 

error: Content is protected !!
Scroll to Top