ಉಪ್ಪಿನಂಗಡಿ: ಇತ್ತಂಡಗಳ ನಡುವೆ ತಾರಕಕ್ಕೇರಿದ ಜಗಳ ➤ ಐವರು ಆಸ್ಪತ್ರೆಗೆ ದಾಖಲು



(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 06. ಎರಡು ಕೋಮಿನ ನಡುವಿನ ಗಲಾಟೆಯು ತಲ್ವಾರ್ ದಾಳಿ ಮೂಲಕ ಅಂತ್ಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ಇಳಂತಿಲ ಗ್ರಾಮದ ಅಂಡೆತಡ್ಕ ಎಂಬಲ್ಲಿ ನಡೆದಿದೆ.







ಫಯಾಝ್ ಹಾಗೂ ಹಫೀಝ್ ಎಂಬವರು ರಾತ್ರಿ ವೇಲೆ ಅಂಗಡಿಯೊಂದರ ಬಳಿ ಇದ್ದ ಸಂದರ್ಭ ಅಲ್ಲಿಗೆ ಬಂದ ಐದು ಮಂದಿಯ ತಂಡ ಏಕಾಏಕಿ ತಲ್ವಾರ್ ದಾಳಿ ನಡೆಸಿದ್ದಾರೆ. ಬಳಿಕ ಬೈಕ್ ಮೂಲಕ ಬಂದ 40 ಮಂದಿಯ ತಂಡವೊಂದು ಅಂಡೆತಡ್ಕದ ಅಂಗಡಿಯೊಂದರಲ್ಲಿ ಕುಳಿತಿದ್ದ ಸಿದ್ದೀಕ್, ಅಯ್ಯೂಬ್ ಹಾಗೂ ಝಕರಿಯಾ ಎಂಬವರ ಮೇಲೆ ತಲ್ವಾರ್ ದಾಳಿ ನಡೆಸಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.






 

 

error: Content is protected !!
Scroll to Top