ಎಸ್ಕೆಎಸ್ಸೆಸ್ಸೆಫ್ ಸದಸ್ಯತ್ವ ಅಭಿಯಾನ- ಸುಳ್ಯ ವಲಯ ಮಟ್ಟದ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 03. ‘ರಾಜಿಯಾಗದ ಸ್ವಾಭಿಮಾನ’ ಎಂಬ ಘೋಷ ವಾಕ್ಯದೊಂದಿಗೆ ನಡೆಯುತ್ತಿರುವ ಎಸ್ಕೆಎಸ್ಸೆಸ್ಸೆಫ್ ಸುಳ್ಯ ವಲಯ ಮಟ್ಟದ ಸದಸ್ಯತ್ವ ಅಭಿಯಾನದ ಉದ್ಘಾಟನೆಯು ಶುಕ್ರವಾರದಂದು ಸುನ್ನೀ ಮಹಲ್ ಸುಳ್ಯದಲ್ಲಿ ನಡೆಯಿತು.

ತ್ವಲಬಾ ವಿಂಗ್ ಚೇರ್ ಮನ್ ಕಬೀರ್ ಉಸ್ತಾದ್ ಅಜ್ಜಾವರ ಅವರಿಂದ ಎಸ್ಕೆಎಸ್ಸೆಸ್ಸೆಫ್ ಸದಸ್ಯತ್ವ ಅಪೇಕ್ಷಾ ಫಾರಂ ಸ್ವೀಕರಿಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಸೆಫ್ ಸುಳ್ಯ ವಲಯಾಧ್ಯಕ್ಷ ಜಮಾಲ್ ಬೆಳ್ಳಾರೆ, ಪ್ರ.ಕಾರ್ಯದರ್ಶಿ ಅಕ್ಬರ್ ಕರಾವಳಿ, ಕ್ಲಸ್ಟರ್ ಅಧ್ಯಕ್ಷ ರಜಾಕ್ ಕರಾವಳಿ, ಅಬ್ದುಲ್ ಖಾದರ್ ಫೈಝಿ, ಶಮೀಮ್ ಅರ್ಶದಿ, ಶಾಫಿ ಮುಕ್ರಿ ಅಜ್ಜಾವರ, ಬಶೀರ್ ಯು.ಪಿ, ಆಶಿಕ್ ಸುಳ್ಯ, ಶಹೀದ್ ಪಾರೆ, ತಾಜುದ್ದೀನ್ ಪಾಲ್ತಾಡ್, ಝುಬೈರ್ ಆರಂತೋಡು ಹಾಗೂ ಹಮೀದ್ ಯಮಾನಿ ಮೊದಲಾದವರು ಉಪಸ್ಥಿತರಿದ್ದರು.

Also Read  ಅರೆಕಾಲಿಕ ಶಿಕ್ಷಕರ ನೇಮಕಾತಿ- ಅರ್ಜಿ ಆಹ್ವಾನ

 

error: Content is protected !!
Scroll to Top