ಬೆಳ್ಳಾರೆ: ಹರಾಜಾದರೂ ತೆರೆಯದ ಮೀನು ಸ್ಟಾಲ್ | ಮರು ಏಲಂ ಮಾಡುವಂತೆ ಆಗ್ರಹ ➤ ಜಿ.ಪಂ. & ತಾ.ಪಂ. ಸಿಇಒ ಗೆ ಇಕ್ಬಾಲ್ ಬೆಳ್ಳಾರೆ ದೂರು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಡಿ. 03. ಬೆಳ್ಳಾರೆ ಗ್ರಾಮ ಪಂಚಾಯತ್ ಅಧೀನದಲ್ಲಿರುವ ಹಸಿ ಮೀನು ಮಾರುಕಟ್ಟೆ ಸ್ಟಾಲ್ ನಂ. 1, 2 ಮತ್ತು 3 ನ್ನು ಸೆಪ್ಟೆಂಬರ್ 18ರಂದು ಬಹಿರಂಗ ಹರಾಜು ನಡೆಸಲಾಗಿದ್ದು, ಅದರಂತೆ 1 ನೇ ಸ್ಟಾಲ್ 3,02,000 ಕ್ಕೆ, 2ನೇ ಸ್ಟಾಲ್ 6,01,000 ಕ್ಕೆ ಹಾಗೂ 3ನೇ ಸ್ಟಾಲ್ 3,10,000 ಕ್ಕೆ ಬಿಡ್ಡುದಾರರಾದ ಜಯಂತ ಎಂಬವರಿಗೆ ಏಲಂ ಆಗಿರುತ್ತದೆ. ಆದರೆ ಸಂತೆ ಮಾರುಕಟ್ಟೆ ಬಳಿಯಿರುವ ಸ್ಟಾಲ್ ನಂಬರ್ 2 ನ್ನು ಮಾತ್ರ ಅರ್ಧ ಹಣ ನೀಡಿ ತೆರೆದಿರುತ್ತಾರೆ. ಹರಾಜಿನ ಕರಾರು ಪ್ರಕಾರ ಎಲ್ಲಾ ಮೊತ್ತವನ್ನು ಪಾವತಿಸಬೇಕಿತ್ತು. ಆದರೆ ಅರ್ಧ ಮೊತ್ತದ ಚೆಕ್ ನ್ನು ನೀಡಿ ಸಮಯವನ್ನು ಕೇಳಿರುತ್ತಾರೆ. ಹಾಗಾಗಿ ಕೂಡಲೇ ಎಲ್ಲಾ ಹಣವನ್ನು ಪಾವತಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೆಯೇ ಸ್ಟಾಲ್ ನಂ. 1 ಮತ್ತು 2 ನ್ನು ಹರಾಜಾಗಿ ಎರಡು ತಿಂಗಳಾದರೂ ತೆರೆಯದೇ ಇರುವುದರಿಂದ ಪಂಚಾಯತ್ ನಿಧಿಗೆ ನಷ್ಟ ಉಂಟಾಗಿದೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಕೂಡಲೇ ಸ್ಟಾಲ್ ನ್ನು ತರೆಯುವಂತೆ ಮಾಡಬೇಕು, ಇಲ್ಲದಿದ್ದಲ್ಲಿ ಠೇವಣಿ ನೀಡದೆಯೇ ಮರು ಏಲಂ ನಡೆಸಬೇಕು ಎಂದು ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆಯವರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Also Read  ಮಂಗಳೂರು: 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ

ಈ ಸಂದರ್ಭದಲ್ಲಿ ಎಸ್ಡಿಪಿಐ ಬೆಳ್ಳಾರೆ ಗ್ರಾಮ ಸಮಿತಿ ಅಧ್ಯಕ್ಷ ಸಿದ್ದೀಕ್.ಎಂ, ಕಾರ್ಯದರ್ಶಿ ಜಾಬಿರ್ ಸಿ.ಎಂ ಉಪಸ್ಥಿತರಿದ್ದರು.

 

 

error: Content is protected !!
Scroll to Top