ವಿಧಾನಪರಿಷತ್ ಚುನಾವಣೆ ➤ ಎಸ್ಡಿಪಿಐ ಅಭ್ಯರ್ಥಿಯಿಂದ ಬೆಳ್ತಂಗಡಿಯಲ್ಲಿ ಸಭೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 02. ದಕ್ಷಿಣ ಕನ್ನಡ, ಉಡುಪಿ ವಿಧಾನ ಪರಿಷತ್ ಚುನಾವಣೆಯ ಎಸ್ಡಿಪಿಐ ಪಕ್ಷದ ಅಭ್ಯರ್ಥಿ ಶಾಫಿ ಬೆಳ್ಳಾರೆಯವರ ಪರವಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರಕಾರ್ಯ ನಡೆಸುವ ಬಗ್ಗೆ ಬೆಳ್ತಂಗಡಿ ಕ್ಷೇತ್ರದ ನಾಯಕರೊಂದಿಗೆ ಮತ್ತು ಪಕ್ಷದ ಬೆಂಬಲಿತ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಮಡಂತ್ಯಾರು, ಕುವೆಟ್ಟು ಹಾಗೂ ಲಾಯಿಲಾದಲ್ಲಿ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿಯವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ವಿಧಾನ ಪರಿಷತ್ ಅಭ್ಯರ್ಥಿ ಶಾಫಿ ಬೆಳ್ಳಾರೆ, ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ, ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ಕ್ಷೇತ್ರಾಧ್ಯಕ್ಷರಾದ ನಿಸಾರ್ ಕುದ್ರಡ್ಕ, ಕ್ಷೇತ್ರ ಕಾರ್ಯದರ್ಶಿ ನಿಝಾಮ್ ಗೇರುಕಟ್ಟೆ, ಅಸೆಂಬ್ಲಿ ವಿಜೇತ ಅಭ್ಯರ್ಥಿಗಳ ಉಸ್ತುವಾರಿ ನವಾಝ್ ಕಟ್ಟೆ, ಕುವೆಟ್ಟು ಬ್ಲಾಕ್‌ ಅಧ್ಯಕ್ಷರಾದ ಅಶ್ಫಾಕ್ ಪೂಂಜಾಲಕಟ್ಟೆ, ಉಜಿರೆ ಬ್ಲಾಕ್ ಅಧ್ಯಕ್ಷ ಫಾರೂಕ್ QTF ಮತ್ತು ಪಕ್ಷದ ಬೆಂಬಲಿತ ಚುನಾಯಿತ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Also Read  ಕಡಬ: ಗುಡುಗು - ಮಿಂಚು ಮಿಶ್ರಿತ ಭಾರೀ ಗಾಳಿ ಮಳೆ ➤ ಸಾವಿರಾರು ಅಡಿಕೆ ಮರಗಳು, ತೆಂಗು, ರಬ್ಬರ್ ಧರೆಗುರುಳಿ ಲಕ್ಷಾಂತರ ರೂ. ನಷ್ಟ

 

error: Content is protected !!
Scroll to Top