(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 01. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಡಬ ತಾಲೂಕಿನ ತಾಲೂಕು ಯುವಜನ ಒಕ್ಕೂಟ, ಸವಣೂರಿನ ಸವಣೂರು ಯುವಕ ಮಂಡಲ ಹಾಗೂ ವಿದ್ಯಾರಶ್ಮಿ ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ 2021ರ ಡಿಸೆಂಬರ್ 4ರಂದು ಬೆಳಗ್ಗೆ 9.30ಕ್ಕೆ ಕಡಬ ತಾಲೂಕಿನ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಜನಪದ ನೃತ್ಯ, ಜನಪದ ಹಾಡು, ಏಕಪಾತ್ರಾಭಿನಯ, ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ವಾದ್ಯ, ಹಾರ್ಮೋನಿಯಂ, ಗಿಟಾರ್ ವಾದನ, ಶಾಸ್ತ್ರೀಯ ನೃತ್ಯ ಹಾಗೂ ಆಶುಭಾಷಣ ಸ್ಫರ್ಧೆಗಳನ್ನು ಏರ್ಪಡಿಸಲಾಗಿದೆ. ಯುವಜನೋತ್ಸವದಲ್ಲಿ 15 ರಿಂದ 29 ವರ್ಷದೊಳಗಿನ ಎಲ್ಲಾ ಯುವಕ ಸಂಘ, ಯುವತಿ ಮಂಡಲ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದು. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವ ನೃತ್ಯ ಶಾಲೆಗಳು, ಶಾಲಾ ಕಾಲೇಜುಗಳು, ಯುವಕ/ಯುವತಿ ಮಂಡಲಗಳ ಅಭ್ಯರ್ಥಿಗಳು ಡಿಸೆಂಬರ್ 4 ರಂದು ಬೆಳಿಗ್ಗೆ 9 ಗಂಟೆಯೊಳಗೆ ಹೆಸರು ಅಥವಾ ತಂಡಗಳ ಹೆಸರುಗಳನ್ನು ಕಡಬ ತಾಲೂಕಿನ ಸವಣೂರು ಯುವಕ ಸಂಘಟಕರಲ್ಲಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಮಂಗಳೂರು ತಾಲೂಕಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀಕ್ಷಕ ಮಂಜು ಎಲ್. ಮೊ.ನಂ.9060431251 ಅಥವಾ ಕಡಬ ತಾಲೂಕಿನ ಸವಣೂರು ಯುವಕ ಸಂಘಟಕ ಸುರೇಶ್ ರೈ, ಮೊ.ಸಂ: 9449901945 ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.