ಕಡಬದ ಹಿರಿಯ ಉದ್ಯಮಿ ಪಾಂಡುರಂಗ ಪೈ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಫೆ.10. ಕಡಬದ ಹಿರಿಯ ವರ್ತಕ, ಸಾಮಾಜಿಕ, ಧಾರ್ಮಿಕ ಮುಂದಾಳು ಪಾಂಡುರಂಗ ಪೈ ಅವರು ಭಾನುವಾರದಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆಗೈದಿದ್ದ ಇವರು ಭಾನುವಾರದಂದು ಹೃದಯಾಘಾತದಿಂದ ಮೃತಪಟ್ಟರು. ಮೃತರ ಪಾರ್ಥಿವ ಶರೀರವು ಪೂರ್ವಾಹ್ನ 10 ಗಂಟೆಗೆ ಕಡಬ ತಲುಪಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Scroll to Top