ರಿಕ್ಷಾ ಚಾಲಕನಿಗೆ ಜಾತಿ ನಿಂದನೆ ➤ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 01. ಬುಡಕಟ್ಟು ಸಮುದಾಯದ ವ್ಯಕ್ತಿ ಪ್ರವೀಣ ಎಂಬವರಿಗೆ ಮುನೀರ್ ಎಂಬಾತ ಜಾತಿ ನಿಂದನೆ ಮಾಡಿರುವ ಕುರಿತು ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಕ್ಷಾ ಚಾಲಕನಾಗಿರುವ ಪ್ರವೀಣ್ ಅವರು ನ. 28ರಂದು ಉಡುಪಿಯ ಜಾಮಿಯಾ ಮಸೀದಿ ಬಳಿ ರಿಕ್ಷಾ ನಿಲ್ಲಿಸಿ ಗ್ರಾಹಕರಿಗಾಗಿ ಕಾಯುತ್ತಿದ್ದ ವೇಳೆ, ಮುನೀರ್ ಎಂಬಾತ ತನ್ನ ರಿಕ್ಷಾದಲ್ಲಿ ಬಂದು ಪ್ರವೀಣ್ ಅವರ ರಿಕ್ಷಾಗೆ ಅಡ್ಡ ನಿಲ್ಲಿಸಿ ‘ರಿಕ್ಷಾ ತೆಗಿ, ನಿಮಗೆ ಇಲ್ಲಿ ನಿಲ್ಲಿಸಲು ಯಾರು ಹೇಳಿದ್ದು, ನೀನು ಕೊರಗ ಇಲ್ಲಿಂದ ಹೋಗು’ ಎಂದು ಬೈದು ಜಾತಿನಿಂದನೆ ಮಾಡಿದ್ದಾನೆ ಹಾಗೂ ಇತರ ಮೂವರು ಹೊಡೆಯಲು ಬಂದಿರುತ್ತಾರೆ ಎಂದು ಪ್ರವೀಣ್ ದೂರಿನಲ್ಲಿ ತಿಳಿಸಿದ್ದಾರೆ.

Scroll to Top