(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 01. ಹೊಸ ರೂಪಾಂತರಿ ಒಮಿಕ್ರಾನ್ ಭೀತಿಯ ಹಿನ್ನೆಲೆ ವಿದೇಶದಿಂದ ಬರುವ ಎಲ್ಲರಿಗೂ ಇಂದಿನಿಂದ ವಿಮಾನ ನಿಲ್ದಾಣಗಳಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಡಿರುವ ಸಿದ್ದತೆಗಳನ್ನು ಪರಿಶೀಲನೆ ಮಾಡಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆರ್ಟಿಪಿಸಿಆರ್ ಟೆಸ್ಟ್ ನಿಂದ ಪಾಸಿಟಿವ್ ಬಂದವರಿಗೆ ನೇರವಾಗಿ ಐಸೋಲೇಷನ್ ವಾರ್ಡ್ ಗೆ ಸ್ಥಳಾಂತರಿಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು. ನೆಗೆಟಿವ್ ವರದಿ ಬಂದರೆ ಅವರು ಮನೆಯಲ್ಲೇ ಏಳು ದಿನಗಳ ಕ್ವಾರಂಟೈನ್ ಇರಬೇಕು. ರೋಗ ಲಕ್ಷಣಗಳಿದ್ದು, ವರದಿಯಲ್ಲಿ ನೆಗೆಟಿವ್ ಬಂದರೆ ಐದು ದಿನಗಳ ಕಾಲ ಕ್ವಾರಂಟೈನ್ ಇರಿಸಿ ಬಳಿಕ ಪರೀಕ್ಷಿಸಲಾಗುವುದು. ಅದರಲ್ಲೂ ನೆಗೆಟಿವ್ ಬಂದರೆ ಮತ್ತೆ ಏಳು ದಿನಗಳ ಹೋಂ ಕ್ವಾರಂಟೈನ್ ಮಾಡಲಾಗುವುದು ಎಂದರು.