ಸ್ನೇಹಿತರೊಂದಿಗೆ ಮ್ಯೂಸಿಕ್ ಪಾರ್ಟಿ ಮಾಡಬೇಕೆ…??? ►ಹಾಗಾದರೆ ಈ ಆ್ಯಪ್ ಡೌನ್‌ಲೋಡ್ ಮಾಡಿ…!!!

(ನ್ಯೂಸ್ ಕಡಬ) newskadaba.com ಕಡಬ, ನ.4.  ಸ್ನೇಹಿತರೊಂದಿಗೆ ಸಂಗೀತವನ್ನು ಪ್ಲೇ ಮಾಡಿ ಪಾರ್ಟಿ ಖುಷಿ ಹೆಚ್ಚಿಸ ಬೇಕೆ..??  ಏಕಕಾಲದಲ್ಲಿ  ಉಚ್ಛ ಸ್ವರದಲ್ಲಿ ನಿಮ್ಮ ಹ್ಯಾಂಡ್ ಸೆಟ್‌ನಲ್ಲಿ ಯೂಟ್ಯೂಬ್, ಸ್ಪಾಟಿಫೈ, ಸೌಂಡ್‌ಕ್ಲೌಡ್ ಅಥವಾ ಮ್ಯೂಸಿಕ್ ಲೈಬ್ರೆರಿಯಲ್ಲಿ ಸಂಗೀತವನ್ನು ಪ್ಲೇ ಮಾಡಿ ಪಾರ್ಟಿಯಲ್ಲಿ ಕುಣಿಯಲು ನೆರವಾಗುವ  ‘ಪಾರ್ಟಿ ಮ್ಯೂಸಿಕ್ ಆ್ಯಪ್’ ಬಂದಿದೆ.

ಹೌದು ಈ ಆ್ಯಪ್ ಹೆಸರು “ಆ್ಯಂಪ್‌ಮಿ” ಅಂತ. ಈ ‘ಆ್ಯಂಪ್‌ಮಿ’ ಆ್ಯಪ್ ನಲ್ಲಿ ಜೈಂಟ್ ಮಲ್ಟಿ ಸ್ಪೀಕರ್ ಸೆಟಪ್ ಸಹಾಯದಿಂದ ಮೊಬೈಲ್ ಫೋನ್ ಹಾಗೂ ಬ್ಲೂಟೂಥ್ ಸ್ಪೀಕರ್ ಬಳಸಿ ಪರಸ್ಪರ ಒಬ್ಬರ ಸೆಟ್‌ಗಳನ್ನು ಇನ್ನೊಬ್ಬರ ಸೆಟ್‌ಗಳಿಗೆ ಸಿಂಕ್ ಮಾಡುವ ಮೂಲಕ ಏಕಕಾಲದಲ್ಲಿ ಹಾಡುಗಳನ್ನು ಪ್ಲೇ ಮಾಡಿ ಸಂಗೀತದ ಸದ್ದನ್ನು ಹೆಚ್ಚಿಸುವ ಖುಷಿ ನೀಡುತ್ತದೆ.

Also Read  ಜಿಯೋ ಉಚಿತ ಫೋನ್ ಬುಕಿಂಗ್ ಇಂದಿನಿಂದ ಆರಂಭ ► ಹೇಗೆ ಬುಕ್ ಮಾಡುವುದು ಎನ್ನುವ ಗೊಂದಲವೇ...?

ಈ ಸೇವೆ ಆಫ್‌ಲೈನ್‌ನಲ್ಲಿ ಲಭ್ಯವಾಗುತ್ತಿರುವುದು ವಿಶೇಷ. ಈ ಸೇವೆ ಬಳಸಲು ನಿಮ್ಮ ಹಾಗೂ ನಿಮ್ಮ ಸ್ನೇಹಿತರು ಆ್ಯಂಪ್‌ಮಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಿಕ ಏಕಕಾಲಕ್ಕೆ ಹಾಡುಗಳನ್ನು ಹಂಚಿಕೊಂಡು ಪ್ಲೇ ಮಾಡಿ ಖುಷಿ ಹೆಚ್ಚಿಸಿಕೊಳ್ಳಿ. ನೀವು ಪ್ಲೇ ಮಾಡಿದ ಹಾಡು ಅಥವಾ ವೀಡಿಯೋವನ್ನು ಏಕಕಾಲಕ್ಕೆ ನಿಮ್ಮ ಸ್ನೇಹಿತನೂ ಪ್ಲೇ ಮಾಡಲು ಇದು ಅವಕಾಶ ಕಲ್ಪಿಸುತ್ತದೆ. ಇಂಟರ್‌ನೆಟ್ ಸಂಪರ್ಕ ಇಲ್ಲದ ಸಂದರ್ಭದಲ್ಲೂ ಆಫ್‌ಲೈನ್ ಮೋಡ್‌ನಲ್ಲಿ ಪರ್ಸನಲ್ ಹಾಟ್‌ಸ್ಪಾಟ್ ಸೃಷ್ಟಿಸಿ ಈ ಸೇವೆ ಬಳಸಬಹುದು. ಇದಕ್ಕೋಸ್ಕರ ತನ್ನದೇ ಆದ ವೈಫೈ ಜಾಲವನ್ನು ಆ್ಯಂಪ್ ಮಿ ರೂಪಿಸುತ್ತಿದೆ.

error: Content is protected !!
Scroll to Top