ಪಂಜ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ..! ➤ ಕಾರು ಸಂಪೂರ್ಣ ಸುಟ್ಟು ಕರಕಲು



(ನ್ಯೂಸ್ ಕಡಬ) newskadaba.com ಪಂಜ, ನ. 24. ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರು ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಬಳ್ಪದ ಪಾದೆ ಎಂಬಲ್ಲಿ ಬುಧವಾರದಂದು ಸಂಜೆ ನಡೆದಿದೆ.







ಪಂಜದ ಕೇಶವ ಆಚಾರಿ ಎಂಬವರು ತಮ್ಮ ಕಾರಿನಲ್ಲಿ ಏನೆಕಲ್ಲು ಕಡೆಯಿಂದ ಕೆಲಸ ಮುಗಿಸಿ ಬರುತ್ತಿದ್ದ ವೇಳೆ ಪಾದೆ ಎಂಬಲ್ಲಿ ತಲುಪುತ್ತಿದ್ದಂತೆ ಹೊಗೆ ಕಾಣಿಸಿಕೊಂಡಿದ್ದು, ಕಾರಿನಿಂದ ಇಳಿದ ಅವರು ಬೋನೆಟ್ ತೆರೆಯುವಷ್ಟರಲ್ಲಿ ಬೆಂಕಿ ಹತ್ತಿಕೊಂಡು ಕಾರು ಸಂಪೂರ್ಣ ಹೊತ್ತಿ ಉರಿದಿದೆ ಎನ್ನಲಾಗಿದೆ.






error: Content is protected !!
Scroll to Top