ಕಡಬ: ಯುವವಾಹಿನಿ ಘಟಕದ ನೂತನ ಪದಾಧಿಕಾರಿಗಳ ಪದಗಗ್ರಹಣ ಸಮಾರಂಭ

(ನ್ಯೂಸ್ ಕಡಬ) newskadaba.com ಕಡಬ, ನ. 22. ಯುವವಾಹಿನಿ ಕಡಬ ಘಟಕದ 2021 -22 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರದಂದು ನಡೆಯಿತು.

ಇದರ ಉದ್ಘಾಟನೆಯನ್ನು ಮಾಡಿದ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಂಜಿನಿಯರ್ ಸಜಿ ಕುಮಾರ್ ಮಾತನಾಡಿ, ಯುವ ಮನಸುಗಳಲ್ಲಿನ ಉತ್ತಮ ಯೋಚನೆಗಳನ್ನು ಯೋಜನೆಗಳನ್ನಾಗಿ ರೂಪಿಸಿ ಸಾಮಾಜಿಕ ಬದಲಾವಣೆಗೆ ಕೊಡುಗೆಯಾಗಿ ನೀಡಬೇಕು. ಸಮಾಜದಲ್ಲಿನ ದುರ್ಬಲರನ್ನು ಅಣಕಿಸುವುದಕ್ಕಿಂತ ಅವರನ್ನು ನಮ್ಮೊಂದಿಗೆ ಜೊತೆಯಾಗಿಸುವ ಪ್ರಯತ್ನವನ್ನು ಸಂಘಟನೆಯ ಮೂಲಕ ಮಾಡಲು ಸಾಧ್ಯ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಡಬ ಘಟಕದ ಅಧ್ಯಕ್ಷ ಶಿವ ಪ್ರಸಾದ್ ನೂಚಿಲ ಮಾತನಾಡಿ, ಸಾಮಾಜಿಕವಾಗಿ ತೊಡಗಿಕೊಳ್ಳುವ ಮೂಲಕ ನಾವು ಜನ ಸಮುದಾಯದಲ್ಲಿ ಸಾಮಾಜಿಕ ಪ್ರಜ್ಞೆಯ ಅರಿವನ್ನು ಹೆಚ್ಚಿಸಬೇಕು. ಸಂಘಟನೆಯ ಧ್ಯೇಯ ಉದ್ದೇಶಗಳನ್ನು ಏಕಮನಸ್ಕರಾಗಿ ಈಡೇರಿಸೋಣ ಎಂದರು. ಮುಖ್ಯ ಅತಿಥಿಗಳಾಗಿ ಗುರುದೇವ ಸಹಕಾರಿ ಸಂಘ ಕಡಬ ಶಾಖೆಯ ಮ್ನ್ಯಾನೇಜರ್ ಜಗದೀಶ್, ಬಿರ್ವ ಡ್ರೈವಿಂಗ್ ಸ್ಕೂಲ್ ಮಾಲಕ ಶೇಖರ ಬಿರ್ವ, ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಜನಾರ್ಧನ ಭಾಗವಹಿಸಿದ್ದರು.

Also Read  ನಾಳೆ (ಜೂ.18) ದ್ವಿತೀಯ ಪಿಯುಸಿ ಫಲಿತಾಂಶ

ಈ ಸಂದರ್ಭದಲ್ಲಿ ಪುತ್ತೂರು ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅವರನ್ನು ಸನ್ಮಾನಿಸಲಾಯಿತು. ಹಾಗೂ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. ಅಧ್ಯಕ್ಷರಾಗಿ ಪ್ರವೀಣ್ ಓಂಕಲ್, ಕಾರ್ಯದರ್ಶಿಯಾಗಿ ಕೃಷ್ಣಪ್ಪ ಅಮೈ, ಜೊತೆ ಕಾರ್ಯದರ್ಶಿಯಾಗಿ ಸರಿತಾ ಉಂಡಿಲ, ಉಪಾಧ್ಯಕ್ಷರುಗಳಾಗಿ ಸುಂದರ ಪೂಜಾರಿ ಅಂಗಣ ಹಾಗೂ ದೀಕ್ಷಿತ್ ಪಣೆಮಜಲು, ಕೋಶಾಧಿಕಾರಿಯಾಗಿ ಧನಂಜಯ ಮರ್ಧಾಳ, ಸಂಘಟನಾ ಕಾರ್ಯದರ್ಶಿಯಾಗಿ ಸತೀಶ್ ಕೆ. ಐತ್ತೂರು ಅವರನ್ನು ಆಯ್ಕೆ ಮಾಡಲಾಯಿತು.

error: Content is protected !!
Scroll to Top