ಸಂಬಳ ಕೇಳಿದ್ದಕ್ಕೆ ದಲಿತ ಕಾರ್ಮಿಕನ ಕೈಕಡಿದ ಭೂಪ..!

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ನ. 22. ಸಂಬಳ ಕೇಳಿದ್ದಕ್ಕೆ ದಲಿತ ಕಾರ್ಮಿಕನೋರ್ವನ ಕೈಕಡಿದು ಹೊಲಕ್ಕೆಸೆದಿರುವ ಮನಕಲುಕುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಡೌಲ್ಮ್ ಗ್ರಾಮದಲ್ಲಿ ನಡೆದಿದೆ.

ಸಂತ್ರಸ್ತ ಕಾರ್ಮಿಕನನ್ನು ಅಶೋಕ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿ ಆರೋಪಿ ಗಣೇಶ್ ಮಿಶ್ರಾ ಎಂಬಾತನ ಮೆಲೆ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಸನ್ ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಸಂತ್ರಸ್ತ ಅಶೋಕ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಈತ ತನ್ನ ಸಂಬಳದ ಹಣವನ್ನು ಕೇಳಿದ್ದಕ್ಕೆ ಮೇಲ್ವರ್ಗದ ಗಣೇಶ್ ಎಂಬಾತ ಈತನ ಕೈಯನ್ನು ಕತ್ತಿಯಿಂದ ಕಡಿದು ಹೊಲಕ್ಕೆ ಎಸೆದಿದ್ದಾನೆ.

Also Read  ದಿನಗೂಲಿ ಆಧಾರದಲ್ಲಿ ಭಿಕ್ಷಾಟನೆ ➤ 55ಕ್ಕೂ ಅಧಿಕ ಆರೋಪಿಗಳು ವಶಕ್ಕೆ

error: Content is protected !!
Scroll to Top