ಕಡಬ: ಎಸ್ಕೆಎಸ್ಸೆಸ್ಸೆಪ್ ವತಿಯಿಂದ ಸಾರ್ವಜನಿಕ ಸೇವೆಗೆ ನೂತನ ಆಂಬ್ಯುಲೆನ್ಸ್ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಕಡಬ, ನ.21. ಎಸ್ಕೆಎಸ್ಸೆಸ್ಸೆಪ್ ಕಡಬ ವಲಯ ಹಾಗೂ ಎಸ್ಕೆಎಸ್ಸೆಸ್ಸೆಪ್ ಜಿಸಿಸಿ ವತಿಯಿಂದ ಅಂಬ್ಯುಲೆನ್ಸ್ ಲೋಕಾರ್ಪಣಾ ಕಾರ್ಯಕ್ರಮವು ಭಾನುವಾರ ಸಂಜೆ ಕಡಬದ ಅನುಗ್ರಹ ಸಭಾಭವನದಲ್ಲಿ ನಡೆಯಿತು.

ಕಡಬ ಟೌನ್ ಜುಮಾ ಮಸೀದಿಯ ಖತೀಬರಾದ ಇಬ್ರಾಹಿಂ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಸೈಂಟ್ ಜೋಕಿಮ್ಸ್ ಚರ್ಚ್ ನ ಧರ್ಮಗುರುಗಳಾದ ಫಾ| ಅರುಣ್ ವಿಲ್ಸನ್ ಲೋಬೋ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್, ಕಡಬ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ್ ಎನ್.ಕೆ., ಕಡಬ ಲಯನ್ಸ್ ಕ್ಲಬ್ ಅಧ್ಯಕ್ಷ ದಿನೇಶ್ ಆಚಾರ್ಯ, ಸುಬ್ರಹ್ಮಣ್ಯ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ತ್ರಿಮೂರ್ತಿ, ಕೆಪಿಸಿಸಿ ಸಂಯೋಜಕರಾದ ಜಿ. ಕೃಷ್ಣಪ್ಪ, ಜೀಪ್ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಅಶ್ರಫ್ ಮರ್ಧಾಳ, ಕಡಬ ಕದಂಬ ರಿಕ್ಷಾ ಚಾಲಕ ಮಾಲಕ ಸಂಘದ ನಿಯೋಜಿತ ಅಧ್ಯಕ್ಷರಾದ ಜಗದೀಶ್ ರೈ, ಕಡಬದ ಯುವ ಉದ್ಯಮಿ ಫ್ರಾನ್ಸಿಸ್, ಕಡಬ ಮೆಸ್ಕಾಂ ಎಇಇ ಸಜಿಕುಮಾರ್ ಪ್ರಮುಖರಾದ ಅಭಿಲಾಷ್ ಪಿ.ಕೆ., ಸತೀಶ್ ಕೆ., ಅಬ್ದುಲ್ ಖಾದರ್ ಸುಂಕದಕಟ್ಟೆ, ಅಬ್ದುಲ್ ರಹಮಾನ್ ಅಡ್ಕಾಡಿ, ಸತೀಶ್ ನಾಯ್ಕ್ ಮೇಲಿನಮನೆ ಮೊದಲಾದವರು ಉಪಸ್ಥಿತರಿದ್ದರು. ಎಸ್ಕೆಎಸ್ಸೆಸ್ಸೆಫ್ ಕಡಬ ವಲಯದ ಅಧ್ಯಕ್ಷರಾದ ಅಶ್ರಫ್ ಶೇಡಿಗುಂಡಿ ಸ್ವಾಗತಿಸಿ, ಅಬ್ದುಲ್ ಖಾದರ್ ಜನಪ್ರಿಯ ಕಾರ್ಯಕ್ರಮ ನಿರೂಪಿಸಿದರು.

Also Read  ಚಿಕ್ಕಮಗಳೂರು: 80 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಕಾರು ➤ ಬೆಳ್ತಂಗಡಿಯ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತ್ಯು

error: Content is protected !!
Scroll to Top