“ಘಟನೆಗೆ ಕಾರಣ ಯಾರು ಅಂತ ಹೇಳಲು ಭಯವಾಗುತ್ತಿದೆ” ➤ ಡೆತ್ ನೋಟ್ ಬರೆದಿಟ್ಟು ಬಾಲಕಿ ನೇಣಿಗೆ ಶರಣು

(ನ್ಯೂಸ್ ಕಡಬ) newskadaba.com ಕರೂರು, ನ. 20. ಲೈಂಗಿಕ ಶೋಷಣೆಯಿಂದ ಬೇಸತ್ತ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಕರೂರಿನಲ್ಲಿ ನಡೆದಿದೆ.


ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ಈಕೆ ಶುಕ್ರವಾರದಂದು ಸಂಜೆ ಕಾಲೇಜಿನಿಂದ ಬಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪಕ್ಕದ ಮನೆಯ ಮಹಿಳೆಯೋರ್ವರು ಘಟನೆಯನ್ನು ನೋಡಿ ಬಾಲಕಿಯ ತಾಯಿ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಮೊದಲು ಡೆತ್ ನೋಟ್ ಬರೆದಿಟ್ಟ ಆಕೆ “ಕರೂರ್ ಜಿಲ್ಲೆಯಲ್ಲಿ ಲೈಂಗಿಕ ಶೋಷಣೆಯಿಂದ ಸಾಯುವ ಕೊನೇ ಹುಡುಗಿ ನಾನೇ ಆಗಿರಬೇಕು. ಈ ನಿರ್ಧಾರಕ್ಕೆ ಕಾರಣ ಯಾರು ಅಂತ ಹೇಳಲು ಭಯವಾಗುತ್ತಿದೆ. ನಾನು ಭೂಮಿಯಲ್ಲಿ ಧೀರ್ಘಕಾಲ ಬದುಕಿ ಇತರರಿಗೆ ಸಹಾಯ ಮಾಡಬೇಕೆಂದು ಬಯಸಿದ್ದೆ. ಆದರೆ ಈಗ ನಾನು ಇಹಲೋಕ ತ್ಯಜಿಸುವಂತಾಗಿದೆ” ಎಂದು ಬರೆದಿಟ್ಟಿದ್ದಾಳೆ.

Also Read  ಪತ್ನಿಯ ಮೇಲಿನ ದ್ವೇಷಕ್ಕೆ 18 ಮಂದಿ ಮಹಿಳೆಯರನ್ನು ಹತ್ಯೆಗೈದ ನರಹಂತಕ..!

error: Content is protected !!
Scroll to Top