ಕಣಜದ ಹುಳುಗಳಿಂದ ಮಕ್ಕಳನ್ನು ರಕ್ಷಿಸಿದ ಗೃಹರಕ್ಷಕ ದಳದ ಸಿಬಂದಿ ಮೃತ್ಯು..!

(ನ್ಯೂಸ್ ಕಡಬ) newskadaba.com ಮಂಗಳೂರು, ನ. 19. ಕಣಜದ ಹುಳುಗಳ ದಾಳಿಯಿಂದ ಮಕ್ಕಳನ್ನು ರಕ್ಷಿಸಲು ಹೋದ ಗೃಹರಕ್ಷಕದಳದ ಸಿಬ್ಬಂದಿಯೋರ್ವರು ಹುಳುಗಳ ದಾಳಿಗೆ ತುತ್ತಾಗಿ ಮೃತಪಟ್ಟ ಘಟನೆ ಕಿನ್ನಿಗೋಳಿ ಸಮೀಪ ನಡೆದಿದೆ.

ಮೃತರನ್ನು ಎಕ್ಕಾರು ದೇವರಗುಡ್ಡೆ ನಿವಾಸಿ ಸಂತೋಷ್(35) ಎಂದು ಗುರುತಿಸಲಾಗಿದೆ. ಇವರು ಕಿನ್ನಿಗೋಳಿ ಬಳಿಯ ಶ್ರೀರಾಮ ಮಂದಿರದ ಬಳಿ ರಿಕ್ಷಾದಲ್ಲಿ ತೆರಳುತ್ತಿದ್ದ ಸಂದರ್ಭ ಕಿನ್ನಿಗೋಳಿ ಪರಿಸರದ ಶಾಲಾ ಮಕ್ಕಳ ಮೇಲೆ ಕಣಜದ ಹುಳುಗಳು ದಾಳಿ ಮಾಡಿದ್ದನ್ನು ಗಮನಿಸಿ, ತಕ್ಷಣವೇ ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಈ ಸಂದರ್ಭ ಹುಳುಗಳು ಸಂತೋಷ್ ಅವರ ಮೇಲೂ ದಾಳಿ ನಡೆಸಿತ್ತು, ಆದರೆ ಇವರು ಚಿಕಿತ್ಸೆ ಪಡೆಯದೇ ಮನೆಗೆ ಮರಳಿದ್ದರು. ಪರಿಣಾಮ ರಾತ್ರಿಯ ವೇಳೆ ಮನೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರ ರಕ್ಷಣಾ ಕಾರ್ಯಕ್ಕೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Also Read  ಮಂಗಳೂರು ಮಹಾನಗರಪಾಲಿಕೆ ಹಾಗೂ ಆರೋಗ್ಯ ಇಲಾಖೆ ➤ ಡೆಂಗ್ಯೂ ನಿಯಂತ್ರಣ ಹಾಗೂ ಮುಂಜಾಗೃತಾ ಕ್ರಮ

error: Content is protected !!
Scroll to Top