ಇಸ್ಪೀಟ್ ಅಡ್ಡೆಗೆ ದಾಳಿ ➤ 8 ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 19. ಹಣ ಪಣಕ್ಕಿಟ್ಟು ಜೂಜಾಟವಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು 8 ಮಂದಿಯನ್ನು ಬಂಧಿಸಿದ ಘಟನೆ ತಾಲೂಕಿನ ಬಿ ಮೂಡ ಗ್ರಾಮದ ಪೊನ್ನೋಡಿ‌ ಎಂಬಲ್ಲಿ ನಡೆದಿದೆ.


ಬಂಧಿತರಿಂದ ಜೂಜಾಡಲು ಬಳಸಿರುವ ಹಣ ಹಾಗೂ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಎಎಸ್ಪಿ ನೇತೃತ್ವದ ತಂಡ‌ ಹಾಗೂ ಬಂಟ್ವಾಳ‌ ನಗರ ಠಾಣಾ ಪೋಲಿಸರು ಭಾಗವಹಿಸಿದ್ದರು.

 

 

Scroll to Top