ನಕಲಿ‌ ಛಾಪಾ ಕಾಗದ ತಯಾರಿ ಜಾಲ ಪತ್ತೆ ➤ ಐವರ ಬಂಧನ

(ನ್ಯೂಸ್ ಕಡಬ) Newskadaba.com ಬೆಂಗಳೂರು, ನ. 19. ನಕಲಿ ಛಾಪಾ ಕಾಗದಗಳನ್ನಜ ಮುದ್ರಿಸಿ ಎಂಬೋಜಿಂಗ್/ ಪ್ರಾಕಿಂಗ್ ಅಸಲಿ ಎಂದು ನಂಬಿಸಿ ಗ್ರಾಹಕರಿಗೆ ಮಾರಾಟ ಮಾಡಿ ವಂಚಿಸುತ್ತಿದ್ದ ಜಾಲವನ್ನು ಭೇದಿಸಿದ ಗೋವಿಂದಪುರ ಪೊಲೀಸರು ಓರ್ವ ಮಹಿಳೆಯ ಸಹಿತ ಐವರನ್ನು ಬಂಧಿಸಿದ ಕುರಿತು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 63,57,522.25 ರೂ. ಮೌಲ್ಯದ ನಕಲಿ ಛಾಪಾ ಕಾಗದಗಳು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಬೆಂಗಳೂರು, ಕಾಟನ್ ಪೇಟೆ ಬ್ರಾಂಚ್ ಎಂಬ ಹೆಸರಿನ ಸೀಲ್ ಸಹಿತ ಹಲವು ಸೀಲ್ ಗಳು ಹಾಗೂ ಪ್ರಿಂಟಿಂಗ್ ಮೆಶಿನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ‌.

Also Read  ಸುಳ್ಯದಲ್ಲಿ ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿದ ನಂದಕುಮಾರ್ ➤ ಅಭಿಮಾನಿ ಬಳಗದ ಕೋರ್ ಕಮಿಟಿ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರ ಏನು?

error: Content is protected !!
Scroll to Top