ಪುತ್ತೂರು: ಸರಣಿ ಕಳ್ಳತನ

(ನ್ಯೂಸ್ ಕಡಬ) newskadaba.com ಪುತ್ತೂರು, ನ. 16. ಕಬಕ ರೋಟರಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಹೋಟೆಲ್ ವಿಜಿ ಹಾಗೂ ಬ್ರೈಟ್ ಕಾಂಪ್ಲೆಕ್ಸ್ ನಲ್ಲಿರುವ ಕಬಕ ಜನರಲ್ ಸ್ಟೋರ್ ಗೆ ನುಗ್ಗಿದ ಕಳ್ಳರು ನಗದು ಹಾಗೂ ಸುತ್ತುಗಳನ್ನು ಕಳವುಗೈದ ಘಟನೆ ವರದಿಯಾಗಿದೆ.

ರೋಲಿಂಗ್ ಶಟರ್ ನ ಬೀಗ ಮುರಿದು ಒಳನುಗ್ಗಿದ ಕಳ್ಳರು ನಗದು ಹಾಗೂ ಚಿಲ್ಲರೆ ಸಾಮಾಗ್ರಿಗಳನ್ನು ಕಳವುಗೈದಿರುವುದಾಗಿ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Scroll to Top