ಮಾಣಿ ಹೊಡೆದಾಟ ಪ್ರಕರಣ- ನಿರಪರಾಧಿಯ ಬಂಧನ ಖಂಡನೀಯ ➤ ಎಸ್‌ವೈ‌ಎಸ್ ಮಾಣಿ ಸೆಂಟರ್

(ನ್ಯೂಸ್ ಕಡಬ) newskadaba.com ಮಾಣಿ, ನ. 16. ಮೂರು ದಿನಗಳ ಹಿಂದೆ ಮಾಣಿಯಲ್ಲಿ ಅಪಘಾತ ನಡೆದ ಸ್ಥಳದಲ್ಲಿ ಯಾವುದೇ ಕಾರಣವಿಲ್ಲದೆ ಇನ್ನೊಂದು ಕಾರಿನಲ್ಲಿದ್ದ ಮುಸ್ಲಿಂ ಯುವಕರ ಮೇಲೆ ಹಿಗ್ಗಾಮುಗ್ಗಾ ಥಳಿಸುವ ಅಮಾನವೀಯ ರೀತಿಯ ಹಲ್ಲೆ ಪ್ರಕರಣದ ವೀಡಿಯೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಆರೋಪಿಗಳನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತದೆ, ಚುನಾವಣೆಗಳು ಸಮೀಪಿಸುವಾಗ ಗಲಭೆ ಎಬ್ಬಿಸಿ ಲಾಭ ಪಡೆಯಲು ದುಷ್ಕರ್ಮಿಗಳು ಸಂದರ್ಭವನ್ನು ದುರುಪಯೋಗಪಡಿಸಿಕೊಂಡಿದ್ದು, ಅದಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಗಳನ್ನು ಬಂಧಿಸದೆ ಗಲಾಟೆ ಬಿಡಿಸಲು ಹೋದ ನಾಯಕತ್ವ ಗುಣಹೊಂದಿದ ಎಲ್ಲಾ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಸೂಚಿಸುವ ಜನಸ್ನೇಹಿ ನಿರಪರಾಧಿ ವ್ಯಕ್ತಿ ಸೂರಿಕುಮೇರು ಎಸ್‌ವೈ‌ಎಸ್ ಸಂಘಟನೆಯ ನಾಯಕರೂ ಆದಂತಹ ಹನೀಫ್ ಸಂಕ ಎಂಬವರನ್ನು ವಿಚಾರಣೆಯ ನೆಪದಲ್ಲಿ ಬಂಧಿಸಿ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಅಧ್ಯಕ್ಷ ಸುಲೈಮಾನ್ ಸ‌ಅ‌ದಿ ಪಾಟ್ರಕೋಡಿ, ಜಿಲ್ಲಾ ಕೌನ್ಸಿಲರ್ ಇಬ್ರಾಹಿಂ ಸಅದಿ ಮಾಣಿ, ಹಾಜಿ ಯೂಸುಫ್ ಸಯೀದ್ ಪುತ್ತೂರು, ಸ್ವಾದಿಕ್ ಪೇರಮೊಗರು ಒಳಗೊಂಡ ಎಸ್‌ವೈಎಸ್ ಮಾಣಿ ಸೆಂಟರ್ ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಸೌತಡ್ಕ ದೇವಸ್ಥಾನದಲ್ಲಿ ಮಹಿಳೆಯ ಬ್ಯಾಗ್ ನಿಂದ ಚಿನ್ನಾಭರಣ ಕಳವು ➤ ಆರೋಪಿ ಮಹಿಳೆ ಅಂದರ್..!!

error: Content is protected !!
Scroll to Top