ಎಸ್ ವೈಎಸ್ ಮಾಣಿ ವತಿಯಿಂದ ಬೃಹತ್ ಮಾದರಿ ಮೌಲಿದ್ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಾಣಿ, ನ. 02. ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ರಿ.) ಎಸ್‌ವೈಎಸ್ ಮಾಣಿ ಸೆಂಟರ್ ವತಿಯಿಂದ ಲೋಕಾನುಗ್ರಹಿ ಮುಹಮ್ಮದ್ ಮುಸ್ತಫಾ (ಸ.ಅ.) ರವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಬೃಹತ್ ಮಾದರಿ ಮೌಲಿದ್ ಮಜ್ಲಿಸ್ ಸೋಮವಾರದಂದು ಮಾಣಿ ದಾರುಲ್ ಇರ್ಶಾದ್ ಸಮುಚ್ಚಯದ ರಹ್ಮಾನಿಯಾ ಜುಮಾ ಮಸ್ಜಿದ್ ನಲ್ಲಿ ನಡೆಯಿತು.

ಅಸ್ಸಯ್ಯಿದ್ ಹಂಝ ಹಾದಿ ತಂಙಲ್ ಪಾಟ್ರಕೋಡಿರವರು ದುಆಃ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಮೌಲಿದ್ ಮಜ್ಲಿಸಿಗೆ ನೇತೃತ್ವ ನೀಡಿ ಮಾತನಾಡಿ, ಯಾರು ಎಷ್ಟೇ ವಿರೋಧಿಸಿದರೂ ಅಹ್ಲ್‌ಸುನ್ನ ವಲ್ ಜಮಾಅತಿನ ಸಂಘಟನೆಗಳು, ದೀನೀ ಪ್ರೇಮಿಗಳು ಎಲ್ಲಾ ರೀತಿಯ ವಿರೋಧಗಳನ್ನೆಲ್ಲಾ ಹಿಂದಿಕ್ಕಿ ಪ್ರವಾದಿ ಪ್ರಕೀರ್ತನೆಯನ್ನು ವಿಶ್ವದೆಲ್ಲೆಡೆ ಪಸರಿಸುವ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ನಡೆಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಎಸ್‌ವೈಎಸ್ ರಾಜ್ಯ ಸಾಂತ್ವನ ವಿಭಾಗದ ಚೆಯರ್ಮೆನ್ ಜಿ. ಎಂ.ಎಂ. ಕಾಮಿಲ್ ಸಖಾಫಿ ಉಸ್ತಾದ್, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಸಾಬಿತ್ ತಂಙಳ್ ಸಖಾಫಿ ಅಲ್ ಮುಈನಿ, ಜಂಇಯ್ಯತುಲ್ ಉಲಮಾ ಪುತ್ತೂರು ಝೋನಲ್ ಅಧ್ಯಕ್ಷರಾದ ಇಬ್ರಾಹಿಂ ಸ‌ಅದಿ ಮಾಣಿ, ದಾರುಲ್ ಇರ್ಶಾದ್ ಮುದರ್ರಿಸ್ ಯ‌ಅ್‌ಕೂಬ್ ಸ‌ಅದಿ ಬೆಟ್ಟಂಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ದಾರುಲ್ ಇರ್ಶಾದ್ ಖತೀಬರಾದ ನಝೀರ್ ಅಂಜದಿ ಸರಳಿಕಟ್ಟೆ, ಎಸ್‌ವೈಎಸ್ ಜಿಲ್ಲಾ ನಾಯಕರಾದ ಅಬ್ದುರ್ರಶೀದ್ ಸಖಾಫಿ ಗಡಿಯಾರ, ಖಾಸಿಂ ಹಾಜಿ ಪರ್ಲೋಟು, ಜಿಲ್ಲಾ ಕೌನ್ಸಿಲರಾದ ಯೂಸುಫ್ ಸಯೀದ್ ಪುತ್ತೂರು, ಯೂಸುಫ್ ಹಾಜಿ ಸೂರಿಕುಮೇರು, ಸುಲೈಮಾನ್ ಸೂರಿಕುಮೇರು, ದಾವೂದ್ ಕಲ್ಲಡ್ಕ, ಪಿ.ಹೆಚ್. ಅಬ್ದುಲ್ ಲತೀಫ್ ಕಲ್ಲಡ್ಕ, ಸೆಂಟರ್ ನಾಯಕರಾದ ಅಬ್ದುಲ್ ಲತೀಫ್ ಸ‌ಅದಿ ಶೇರಾ, ಹೈದರ್ ಸ‌ಖಾಫಿ, ಅಬ್ದುಲ್ ಅಝೀಝ್ ಸಖಾಫಿ ಸೂರ್ಯ, ಖಾಸಿಂ ಮುಸ್ಲಿಯಾರ್ ಸೂರ್ಯ, ಯ‌ಅ್‌ಕೂಬ್ ನಚ್ಚಬೆಟ್ಟು, ಹಬೀಬ್ ಶೇರಾ, ಅಬ್ಬಾಸ್ ಗಡಿಯಾರ, ಶಾಹುಲ್ ಹಮೀದ್ ಪರ್ಲೋಟು, ಅಬ್ದುಲ್ ಕರೀಂ ಸೂರಿಕುಮೇರು, ಎಸ್‌ವೈಎಸ್ ಬ್ರಾಂಚ್ ನಾಯಕರಾದ ಸಲೀಂ ಮಾಣಿ, ಅಬ್ದುಲ್ ಖಾದರ್ ಶೇರಾ, ಜೆ. ಬಿ. ಮುಹಮ್ಮದ್ ಪಾಟ್ರಕೋಡಿ, ಕೆ ಪಿ ಕಾಸಿಂ ಪಾಟ್ರಕೋಡಿ, ಇಬ್ರಾಹಿಂ ಮಾಣಿ, ಅಬ್ದುಲ್ ಫತ್ತಾಹ್ ಮಾಣಿ, ಅಬ್ದುಲ್ ಲತೀಫ್ ಮಾಣಿ ಇನ್ನಿತರ ಹಲವಾರು ನೇತಾರರು ಉಪಸ್ಥಿತರಿದ್ದರು. ಅಲ್ಲದೇ ಬ್ರಾಂಚ್ ಪದಾಧಿಕಾರಿಗಳ ಸಹಿತ ಬ್ರಾಂಚಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದ್ದರು. ದಾರುಲ್ ಇರ್ಶಾದ್ ಮುತ‌ಅಲ್ಲಿಂಗಳು, ದಾವತೇ ಇಸ್ಲಾಮಿ ಹನಫಿ ವಿದ್ಯಾರ್ಥಿಗಳು ಭಾಗವಹಿಸಿ ಮಜ್ಲಿಸಿಗೆ ಮೆರುಗು ನೀಡಿದರು. ಇಸಾಕ್ ಮಾಣಿ ಹಾಗೂ ಮುಹಮ್ಮದ್ ಅಬೂಬಕ್ಕರ್ ನವವೀ ಪಾಟ್ರಕೋಡಿ ಬೈತ್ ಅಲಾಪನೆ ಮಾಡಿದರು. ಎಸ್‌ವೈಎಸ್ ಮಾಣಿ ಸೆಂಟರ್ ಅಧ್ಯಕ್ಷರಾದ ಸುಲೈಮಾನ್ ಸ‌ಅದಿ ಪಾಟ್ರಕೋಡಿ ಸ್ವಾಗತಿಸಿದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಸ್ವಾದಿಖ್ ಪೇರಮೊಗರು ಧನ್ಯವಾದಗೈದರು. ಸಾಮಾಜಿಕ ಕಾರ್ಯದರ್ಶಿ ಮೊಯ್ದೀನ್ ಕುಟ್ಟಿ ಪೆರ್ನೆ ಕಾರ್ಯಕ್ರಮ ನಿರೂಪಿಸಿದರು.

Also Read  ಕಾರ್ಕಳ‌ ಅತ್ಯಾಚಾರ ಪ್ರಕರಣ - ಮೂರನೇ ಆರೋಪಿ ವಶಕ್ಕೆ

error: Content is protected !!
Scroll to Top