ಶಿರಾಡಿ: ಕಂದಕಕ್ಕೆ ಉರುಳಿದ ಟೆಂಪೊ ಟ್ರಾವೆಲರ್ ➤ ಐವರಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ. 02. ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲರ್ ವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಐವರು ಗಾಯಗೊಂಡ‌ಘಟನೆ ರಾ.ಹೆ.75 ರ ಶಿರಾಡಿಯಲ್ಲಿ ನಡೆದಿದೆ.


ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿದ ಟೆಂಪೊ ಟ್ರಾವೆಲ್ಲರ್ ಸುಮಾರು 60 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ‌ ಐವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಪುತ್ತೂರಿನ ಅಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಬಗ್ಗೆ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Also Read  ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಅಕ್ರಮ ಮರ ಸಾಗಾಟ ➤ ವಿಶೇಷ ಅರಣ್ಯ ಸಂಚಾರಿ ದಳದಿಂದ ಮಿಂಚಿನ ಕಾರ್ಯಾಚರಣೆ

error: Content is protected !!
Scroll to Top