ಕಲ್ಲಾಜೆ: ಶಿವಶಕ್ತಿ ಯುವಕ ಮಂಡಲದ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ ➤ ಮರ್ಧಾಳದ ಕೊಹಿನೂರ್ ಮೆಡಿಕಲ್ಸ್ ಸಹಯೋಗ

(ನ್ಯೂಸ್ ಕಡಬ) newskadaba.com ಕಡಬ, ನ.01. ಐತ್ತೂರು ಗ್ರಾಮದ 72 ಕಾಲನಿ ಶಿವಶಕ್ತಿ ಯುವಕ ಮಂಡಲದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮರ್ಧಾಳದ ಕೊಹಿನೂರ್ ಮೆಡಿಕಲ್ಸ್ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸೋಮವಾರದಂದು ನಡೆಯಿತು.

ಶಿವಶಕ್ತಿ ಯುವಕ ಮಂಡಲದ ಗೌರವಾಧ್ಯಕ್ಷ ರಾಮಮೂರ್ತಿ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ್ ಉದಯಕುಮಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ಕೊಹಿನೂರ್ ಮೆಡಿಕಲ್ಸ್ ನ ಹೈದರ್ ಮರ್ಧಾಳ, ಅಲ್ತಾಫ್ ಮರ್ಧಾಳ, ಲಕ್ಷ್ಮಣ ಜಿ., ರಾಜರತ್ನಂ, ಹನುಮಂತನ್ ಮೊದಲಾದವರು ಉಪಸ್ಥಿತರಿದ್ದರು. ಶಿವಶಕ್ತಿ ಯುವಕ ಮಂಡಲದ ಕಾರ್ಯದರ್ಶಿ ಪುಣ್ಯಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು.

Also Read  ಪಡಿತರ ಚೀಟಿಯಿಂದ ಮೃತರ ಹೆಸರನ್ನು ತೆಗೆಯಲು ಜಿಲ್ಲಾಧಿಕಾರಿ ಸೂಚನೆ

 

 

error: Content is protected !!
Scroll to Top