ಪುನೀತ್ ರಾಜ್ ಕುಮಾರ್ ಮಾಡುತ್ತಿದ್ದ 1800 ಮಕ್ಕಳ ಜವಾಬ್ದಾರಿ ಹೊತ್ತ ತಮಿಳು ನಟ

(ನ್ಯೂಸ್ ಕಡಬ) Newskadaba.com ಬೆಂಗಳೂರು, ನ. 01. ನಟ, ಗಾಯಕ, ನಿರ್ಮಾಪಕ ಹೀಗೆ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಸಾಧನೆಗೈದ ದಿ.ಪುನೀತ್ ರಾಜ್ ಕುಮಾರ್ ಸಮಾಜ ಮುಖಿ ಚಿಂತನೆಗಳನ್ನು ಒಳಗೊಂಡಿದ್ದ ಆದರ್ಶ ವ್ಯಕ್ತಿಯೂ ಅಗಿದ್ದರು. ಬಲಗೈಯಲ್ಲಿ ಕೊಟ್ಟದ್ದು ಎಡಗೈ ತಿಳಿಯಬಾರದು ಎಂಬ ಸಿದ್ದಾಂತದಂತೆ 1,800 ಬಡ ಮಕ್ಕಳನ್ನು ಓದಿಸುತಿದ್ದರು ಎಂಬುದು ಇದೀಗ ಅವರ ನಿಧನದ ನಂತರ ಬೆಳಕಿಗೆ ಬಂದಿದೆ. ಅವರ ಅಕಾಲಿಕ ನಿಧನದ ಬಳಿಕ ಆ ಮಕ್ಕಳ ಜವಾಬ್ದಾರಿಯನ್ನು ದಕ್ಷಿಣ ಭಾರತದ ಖ್ಯಾತ ಬಹುಭಾಷಾ ನಟರೊಬ್ಬರು ಹೊತ್ತುಕೊಳ್ಳುವ ಭರವಸೆಯನ್ನು ನೀಡಿದ್ದಾರೆ.

Also Read  ದುಬೈ - ಕ್ಯಾಲಿಕಟ್ ವಿಮಾನ ಪತನ ➤ ಕೇರಳದ ಏರ್‌ಪೋರ್ಟ್ ನಲ್ಲಿ ದುರ್ಘಟನೆ

ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಪ್ರಖ್ಯಾತ ನಟ ವಿಶಾಲ್ 1800 ಮಕ್ಕಳ ಜವಾಬ್ದಾರಿ ಹೊತ್ತ ನಟ. ಅವರು ಭಾನುವಾರದಂದು ಈ ವಿಚಾರ ತಿಳಿಸಿದ್ದು, ಪುನೀತ್ ರಾಜ್ ಕುಮಾರ್ ಓದಿಸುತ್ತಿದ್ದ 1800 ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಮುಂದಿನ ವರ್ಷದಿಂದ ನಾನು ವಹಿಸಿಕೊಳ್ಳುತ್ತೇನೆ ಎಂದು ಘೋಷಿಸಿದ್ದಾರೆ.

error: Content is protected !!
Scroll to Top