ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕೊರೋನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆ ➤ ಅಂತರ್ರಾಷ್ಟ್ರೀಯ ವಿಮಾನಯಾನವನ್ನು ನ. 30ರ ವರೆಗೆ ನಿಷೇಧಿಸಿದ ಕೇಂದ್ರ ಸರ್ಕಾರ – News Kadaba

ಕೊರೋನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆ ➤ ಅಂತರ್ರಾಷ್ಟ್ರೀಯ ವಿಮಾನಯಾನವನ್ನು ನ. 30ರ ವರೆಗೆ ನಿಷೇಧಿಸಿದ ಕೇಂದ್ರ ಸರ್ಕಾರ

(ನ್ಯೂಸ್ ಕಡಬ) Newskadaba.com ನವದೆಹಲಿ, ಅ. 30. ದೇಶದಲ್ಲಿ ಕೋವಿಡ್ ಹಾಗೂ ರೂಪಾಂತರಿ ವೈರಸ್ ಹೆಚ್ಚುತ್ತಿರುವ ಹಿನ್ನೆಲೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅ. 31ರವರೆಗೆ ಹೇರಲಾಗಿರುವ ನಿರ್ಬಂಧವನ್ನು ನವೆಂಬರ್ 30ರವರೆಗೂ ವಿಸ್ತರಿಸಲಾಗಿದೆ. ಭಾರತದಲ್ಲಿ ಕೋವಿಡ್ ಮಾತ್ರವಲ್ಲದೇ ರೂಪಾಂತರಿ ವೈರಸ್​, ನಿಫಾ ವೈರಸ್, ಎವೈ 4.2 ವೈರಸ್ ಹಾವಳಿಯೂ ಜಾಸ್ತಿಯಾಗಿದ್ದು, ಹೀಗಾಗಿ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರದ ಮೇಲೆ ವಿಧಿಸಿದ್ದ ನಿಷೇಧವನ್ನು ನವೆಂಬರ್ 30ರವರೆಗೂ ವಿಸ್ತರಿಸಲು ಕೇಂದ್ರ ನಿರ್ಧರಿಸಿದೆ.

ಈ ಕುರಿತು ಏವಿಯೇಷನ್ ರೆಗ್ಯುಲೇಟರ್ ಡೈರೆಕ್ಟ್ ರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಆದೇಶ ಹೊರಡಿಸಿದ್ದು, ಇದು ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳಿಗೆ ಮಾತ್ರ ಅನ್ವಯವಾಗಲಿದೆ. ಡಿಜಿಸಿಎಯಿಂದ ಅನುಮತಿ ಪಡೆದಿರುವ ಕಾರ್ಗೋ ವಿಮಾನಗಳ ಸಂಚಾರಕ್ಕೆ ನಿರ್ಬಂಧವಿರುವುದಿಲ್ಲ. ಹಾಗೆಯೇ ವಿಶೇಷ ಅನುಮತಿ ಪಡೆದ ಮಾರ್ಗಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಅವಕಾಶವಿದೆ.


ಕೋವಿಡ್ ಸೋಂಕಿನ ಹಿನ್ನೆಲೆ ಕಳೆದ ವರ್ಷ ಮಾರ್ಚ್ 23ರಿಂದ ಭಾರತದಿಂದ ಹೊರಡುವ ಮತ್ತು ಆಗಮಿಸುವಂತಹ ಎಲ್ಲಾ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸಲಾಗಿದ್ದು, ಅಂತರರಾಷ್ಟ್ರೀಯ ವಾಣಿಜ್ಯ ವಿಮಾನಗಳ ಮೇಲಿನ ನಿರ್ಬಂಧಗಳು ಅ. 31ಕ್ಕೆ ಕೊನೆಗೊಳ್ಳಬೇಕಿತ್ತು. ಇದೀಗ ವೈರಸ್ ಹೆಚ್ಚುತ್ತಿರುವ ಹಿನ್ನೆಲೆ ಭಾರತಕ್ಕೆ ಮತ್ತು ಭಾರತದಿಂದ ಹೊರಹೋಗುವ ಅಂತಾರರಾಷ್ಟ್ರೀಯ ವಿಮಾನಗಳ ಮೇಲಿನ ಅಮಾನತನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.

 

Scroll to Top