(ನ್ಯೂಸ್ ಕಡಬ) Newskadaba.com ನವದೆಹಲಿ, ಅ. 27. ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗಿದ್ದು, ಬೈಕ್ ಅಥವಾ ಸ್ಕೂಟರ್ ನಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವವರಿಗೆ ಹೊಸ ರೂಲ್ಸ್ ಜಾರಿಗೆ ಬಂದಿದೆ. ನಿಯಮ ಪಾಲನೆಯಾಗದಿದ್ದಲ್ಲಿ ದುಬಾರಿ ದಂಡ ಬೀಳುವುದಂತೂ ಗ್ಯಾರಂಟಿ.
ದ್ವಿಚಕ್ರ ವಾಹನದಲ್ಲಿ 4 ವರ್ಷದೊಳಗಿನ ಮಕ್ಕಳನ್ನು ಕರೆದುಕೊಂಡು ಹೋಗುವವರು ಗಂಟೆಗೆ 40ಕ್ಕಿಂತ ಹೆಚ್ಚು ವೇಗದಲ್ಲಿ ಚಲಿಸುವಂತಿಲ್ಲ. ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿ ನೀಡಬೇಕು, ಹಾಗೂ ಅದು ಯುರೋಪಿಯನ್ ಸ್ಟಾಂಡರ್ಡ್ ಹೆಲ್ಮೆಟ್ ಆಗಿರಬೇಕು. ಅಲ್ಲದೇ ಬೈಕ್ ಸವಾರ ಹಾಗೂ ಹಿಂಬದಿ ಕೂತಿರುವ ಮಗುವನ್ನು ಕಟ್ಟುವ ಹಾಗೆ ಬೆಲ್ಟ್ ರೀತಿಯ ಸುರಕ್ಷತಾ ಸಾಧನ ಇರಬೇಕು.