ಮಗುವಿಗೆ ಹಾಲುಣಿಸುತ್ತಿದ್ದ ವೇಳೆ ಪತ್ನಿಯ ಕತ್ತು ಸೀಳಿ ಕೊಲೆಗೈದ ಪತಿ..!

(ನ್ಯೂಸ್ ಕಡಬ) Newskadaba.com ಕಲಬುರಗಿ, ಅ. 23. ಮಗುವಿಗೆ ಹಾಲುಣಿಸುತ್ತಿದ್ದ ಸಂದರ್ಭ ಪತ್ನಿಯನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ನಗರದ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ‌.

ಕೊಲೆಯಾದ ಮಹಿಳೆಯನ್ನು ನಸೀಮಾ ಬೇಗಂ (35) ಎಂದು ಗುರುತಿಸಲಾಗಿದೆ. ಆಕೆಯ ಪತಿ ಇಬ್ರಾಹಿಂ ಎಂಬಾತ ಈ ಕೃತ್ಯವೆಸಗಿರುವ ಆರೋಪಿ. ಕುಡಿತದ ಚಟ ಹೊಂದಿದ್ದ ಇಬ್ರಾಹಿಂ, ಪತ್ನಿಗೆ ಕಿರುಕುಳ ನೀಡುತ್ತಿದ್ದನು. ತವರು ಮನೆಯಿಂದ ಮದ್ಯ ಕುಡಿಯೋಕೆ ಹಣ ತರುವಂತೆ ಪೀಡಿಸುತ್ತಿದ್ದ ಈತ, ಆಕೆ ತವರು ಮನೆಯಿಂದ ಹಣ ತರದ ಹಿನ್ನೆಲೆ ಇಬ್ರಾಹಿಂ ಆಕೆ ಮೇಲೆ ಕೋಪಗೊಂಡ ಆತ ಮಗುವಿಗೆ ಹಾಲುಣಿಸುತ್ತಿರುವ ಸಂದರ್ಭ ಮಾರಕಾಸ್ತ್ರದಿಂದ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

Also Read  ಉಡುಪಿ: ಬಾವಲಿ ಜ್ವರದ ಬಗ್ಗೆ ಆತಂಕದ ಮಾತು ಕೇಳಿಬರುತ್ತಿರುವ ಹಿನ್ನೆಲೆ ► ಸಾವಿರಾರು ಬಾವಲಿಗಳ ನಡುವೆ ವಾಸಿಸುತ್ತಿರುವ ಕುಟುಂಬ ನಿಫಾಃ ಭೀತಿಯಲ್ಲಿ

 

error: Content is protected !!
Scroll to Top