ಅಬಕಾರಿ ಇಲಾಖೆಯಿಂದ ದಾಳಿ ➤ 25 ಕೆ.ಜಿ ಹಸಿ ಗಾಂಜಾ ಗಿಡ ವಶಕ್ಕೆ

(ನ್ಯೂಸ್ ಕಡಬ) Newskadaba.com ಗದಗ, ಅ. 23. ಅಬಕಾರಿ ಇಲಾಖೆ ಪೊಲೀಸರು ದಾಳಿ ನಡೆಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಂಡ ಘಟನೆ ಗದಗ ತಾಲೂಕಿನ ಮದಗನಾರು, ಬೆಳವಡ ಗ್ರಾಮದಲ್ಲಿ ನಡೆದಿದೆ.


ಆರೋಪಿಗಳಾದ ಹುಚ್ಚಪ್ಪ ಬಸಪ್ಪ ತಳ್ವಾರ್, ಅಯ್ಯನಗೌಡ ರಾಮೇಗೌಡ ಗೌಡಪ್ಪಗೌಡ ಮತ್ತು ತಿಪ್ಪನಗೌಡ ನಿಂಗನಗೌಡ ಇನಾಮತಿ ಇವರುಗಳಿಗೆ ಸೇರಿದ ಕೃಷಿ ಹೊಲಗಳಲ್ಲಿ ಗಾಂಜಾ ದೊರೆತಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಂದಾಜು ಎರಡು ಲಕ್ಷ ನಲವತ್ತೈದು ಸಾವಿರ ಮೌಲ್ಯದ 25 ಕೆ.ಜಿ. ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಎನ್ ಡಿಪಿಎಸ್ ಕಾಯ್ದೆಯಡಿಯಲ್ಲಿ ಗದಗ ಉಪ ವಿಭಾಗ ಹಾಗೂ ಗದಗ ವಲಯ ಅಧಿಕಾರಿಗಳು 3 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

Also Read  ಬೆಸ್ಕಾಂ ಬಿಲ್ ಬಳಸಿಕೊಂಡು ದಂಪತಿಗೆ ವಂಚನೆ!

error: Content is protected !!
Scroll to Top