(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 12. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈಯಿಂದ ಬಂದಿಳಿದ ಪ್ರಯಾಣಿಕನೋರ್ವ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ಮೂಲದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಇಂದು ನಸುಕಿನಜಾವ 2 ಗಂಟೆಯ ವೇಳೆಗೆ ಮಂಗಳೂರು ವಿಮಾಣ ನಿಲ್ದಾಣಕ್ಕೆ ಬಂದಿಳಿದಿದ್ದು, ತಪಾಸಣೆಯ ವೇಳೆ ಓರ್ವ ಪ್ರಯಾಣಿಕನಲ್ಲಿ 364 ಗ್ರಾಂ ತೂಕದ 17.54 ಲಕ್ಷ ರೂ. ಮೌಲ್ಯದ ಶುದ್ಧ ಚಿನ್ನವು ದ್ರವರೂಪದಲ್ಲಿ ಪತ್ತೆಯಾಗಿದೆ. ಇದನ್ನು ಗಮ್‌ನೊಂದಿಗೆ ಮಿಶ್ರಣ ಮಾಡಿ, ಕಂದು ಬಣ್ಣದ ಶೀಟ್‌ವೊಂದರಲ್ಲಿ ಪ್ರಯಾಣಿಕ ಅಡಗಿಸಿಟ್ಟಿದ್ದ. ಇದನ್ನು ಟ್ರಾಲಿಯ ಕೆಳಭಾಗದ ಎರಡು ಪದರುಗಳ ಆಳದಲ್ಲಿ ಇರಿಸಿ, ಅಕ್ರಮ ಸಾಗಾಟಕ್ಕೆ ಯತ್ನಿಸಿದ್ದ ಎಂದು ತಿಳಿದುಬಂದಿದೆ.