ಜಗತ್ತಿನೆಲ್ಲೆಡೆ ಸ್ಥಗಿತಗೊಂಡ ವಾಟ್ಸ್ಅಪ್, ಫೇಸ್‌ಬುಕ್‌, ಇನ್ಸ್‌ಟಾಗ್ರಾಂ ➤ ಪರದಾಡಿದ ನೆಟ್ಟಿಗರು

(ನ್ಯೂಸ್ ಕಡಬ) newskadaba.com ನವದೆಹಲಿ, ಅ.05. ಪ್ರಮುಖ ಸೋಷಿಯಲ್ ಮೀಡಿಯಾಗಳಾದ ವಾಟ್ಸ್ಅಪ್ ಮೆಸೆಂಜರ್‌, ಫೇಸ್‌ಬುಕ್, ಇನ್ಸ್‌ಟಾಗ್ರಾಂ ಸರ್ವರ್ ಜಗತ್ತಿನೆಲ್ಲೆಡೆ ಏಕಕಾಲದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಹಲವರು ಪರದಾಡಿದ್ದಾರೆ‌.

ಈ ಕುರಿತು ಮಾಹಿತಿ ನೀಡಲು ಸಾಮಾಜಿಕ ತಾಣ ಬಳಕೆದಾರರು ಟ್ವಿಟರ್‌ ಅನ್ನು ಆಶ್ರಯಿಸಿದ್ದಾರೆ. ಸೋಮವಾರ ರಾತ್ರಿ 9.03 ರ ಸಮಯದಲ್ಲಿ ತಾತ್ಕಾಲಿಕವಾಗಿ ಸರ್ವರ್‌ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಒಡೆತನದ ಮೆಸೆಂಜರ್ ಹಾಗೂ ವಾಟ್ಸ್ಅಪ್ ಬಳಕೆದಾರರು ಪರದಾಡಿದ್ದು, ಈ ಬಗ್ಗೆ ಟ್ವಿಟರ್ ನಲ್ಲಿ ಸಂದೇಶ ರವಾನಿಸಲಾಗಿತ್ತು. ಈ ಬಗ್ಗೆ ಫೇಸ್‌ಬುಕ್‌ ಸಂಸ್ಥೆಯು ಸಾರ್ವಜನಿಕರಲ್ಲಿ ಕ್ಷಮೆ ಕೇಳಿ ಟ್ವೀಟ್‌ ಮಾಡಿತ್ತು. ಹಲವು ಗಂಟೆಗಳ ಅಂತರದಲ್ಲಿ ಇದೀಗ ಸರ್ವರ್ ಸಮಸ್ಯೆಯನ್ನು ಸರಿಪಡಿಸಲಾಗಿದೆ.

Also Read  ರಾಷ್ಟ್ರೀಯ ಗುಪ್ತಚರ ನಿರ್ದೇಶಕರಾಗಿ ತುಳಸಿ ಗಬ್ಬಾರ್ಡ್ ​ನೇಮಕ

 

 

 

error: Content is protected !!
Scroll to Top