ಕಡಬ ಸಂಯುಕ್ತ ಕ್ರಿಸ್‌ಮಸ್ ಆಚರಣಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ► ಅಧ್ಯಕ್ಷರಾಗಿ ರೆ|ಫಾ| ಪೀಟರ್ ಜಾನ್ ಒಐಸಿ, ಕಾರ್ಯದರ್ಶಿಯಾಗಿ ಜೋಯಲ್ ಜೋಸ್ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ನ.01. ಕಡಬ ಸಂಯುಕ್ತ ಕ್ರಿಸ್‌ಮಸ್ ಆಚರಣಾ ಸಮಿತಿಯ ಪೂರ್ವಭಾವಿ ಸಭೆಯು ಕಡಬದ ಬೆಥನಿ ಆಶ್ರಮದಲ್ಲಿ ರೆ| ಫಾ| ಪಿ.ಕೆ.ಅಬ್ರಹಾಂ ರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ‌ ರೆ|ಫಾ| ರೊನಾಲ್ಡ್ ಲೋಬೊ, ಅಧ್ಯಕ್ಷರಾಗಿ ರೆ|ಫಾ| ಪೀಟರ್ ಜಾನ್ ಒ.ಐ.ಸಿ, ಉಪಾಧ್ಯಕ್ಷರಾಗಿ ರೆ|ಫಾ|ಪಿ.ಕೆ.ಅಬ್ರಹಾಂ, ಕಾರ್ಯದರ್ಶಿಯಾಗಿ ಜೋಯಲ್ ಜೋಸ್ ಹಾಗೂ
ಕೋಶಾಧಿಕಾರಿಯಾಗಿ ಎ.ಎಸ್. ಪೈಲಿಯವರನ್ನು ಆರಿಸಲಾಯಿತು. ಇದರ ಜೊತೆಗೆ ಹಲವು ಉಪ ಸಮಿತಿಗಳನ್ನು ರಚಿಸಲಾಯಿತು.

Also Read  ಇಂದಿನಿಂದ ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ದಿವಾಳಿ ಸೇಲ್ ➤‌ ಸ್ಮಾರ್ಟ್​ಫೋನ್​ಗಳ ಮೇಲೆ ಧಮಾಕ ಆಫರ್

ರೆ|ಫಾ| ಪಿ.ಕೆ. ಅಬ್ರಹಾಂ ಸ್ವಾಗತಿಸಿ ಜೋಯಲ್ ಜೋಸ್ ವಂದಿಸಿದರು. ಜೋಸೆಫ್ ಟಿ.ಜೆ. ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top