ಕಡಬ: ‘ಸ್ವಾತಿ ಎಸಿ & ಟಿವಿ ವರ್ಲ್ಡ್’ ಇಲೆಕ್ಟ್ರಾನಿಕ್ ಶೋರೂಂ ಶುಭಾರಂಭ ➤ ಮಾಸಿಕ ಕಂತಿನಲ್ಲಿ ಎಸಿ ಮತ್ತು ಟಿವಿ ಖರೀದಿ ಸೌಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಅ.02. ಇಲ್ಲಿನ ಸೈಂಟ್ ಜೋಕಿಮ್ಸ್ ಚರ್ಚ್‌ನ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸ್ವಾತಿ ಇಲೆಕ್ಟ್ರಾನಿಕ್ಸ್ & ಪಂಪ್ ಪಾಯಿಂಟ್ ಸಹ ಸಂಸ್ಥೆ ಹವಾನಿಯಂತ್ರಕ ಹಾಗೂ ದೂರದರ್ಶನಗಳ ಮಾರಾಟ ಮಳಿಗೆ ಸ್ವಾತಿ ಎ.ಸಿ. & ಟಿ.ವಿ ವರ್ಲ್ಡ್ ಶನಿವಾರದಂದು ಶುಭಾರಂಭಗೊಂಡಿತು.

 

ನೂತನ ಸಂಸ್ಥೆಯನ್ನು ಸೈಂಟ್ ಜೋಕಿಮ್ಸ್ ಚರ್ಚ್‌ನ ಧರ್ಮಗುರು ರೆ.ಫಾ.ಅರುಣ್ ವಿಲ್ಸನ್ ಲೋಬೋ ಅವರು ಉದ್ಘಾಟಿಸಿ ಶುಭಹಾರೈಸಿದರು. ಲಯನ್ಸ್ ಜಿಲ್ಲಾ ಕೋ-ಆರ್ಡಿನೇಟರ್ ಲ| ಗೋವರ್ಧನ ಶೆಟ್ಟಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್, ಕಡಬ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಸ್.ದಿನೇಶ್ ಆಚಾರ್ಯ ನೂತನ ಸಂಸ್ಥೆಗೆ ಶುಭಹಾರೈಸಿದರು.

ಸ್ವಾತಿ ಗ್ರೂಪ್‌ನ ಮಾಲಕ ರಾಜೇಶ್ ಕಂಡೂರು ಅವರು ಮಾತನಾಡಿ, ಉದ್ಯಮ ಕ್ಷೇತ್ರದಲ್ಲಿ 20 ವರ್ಷಗಳ ವ್ಯವಹಾರದಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದು, ಇದೀಗ ಸ್ವಾತಿ ಗ್ರೂಪ್ ನಿಂದ ಕಡಬದಲ್ಲಿ ಮೊತ್ತಮೊದಲ ಬಾರಿಗೆ ಎ.ಸಿ. ಮತ್ತು ಟಿ.ವಿ. ವರ್ಲ್ಡ್ ಎಂಬ ನೂತನ ಶೋರೂಂನ್ನು ಪ್ರಾರಂಭಿಸಲಾಗಿದೆ. ಸಂಸ್ಥೆಯ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು.

Also Read  ಕಡಬ ಪರಿಸರದಲ್ಲಿ ಹಲವು ಉದ್ಯೋಗಗಳು ➤ ಆಸಕ್ತರು ಸಂಪರ್ಕಿಸಿ

 

ನೂತನ ಶೋರೂಂನಲ್ಲಿ ವಿವಿಧ ಬ್ರ್ಯಾಂಡ್ ಗಳ ಟಿವಿ, ಎಸಿ ಗಳು ಮಾಸಿಕ ಕಂತು ಯೋಜನೆಯಡಿ ಮಿತದರದಲ್ಲಿ ಗ್ರಾಹಕರಿಗೆ ದೊರೆಯಲಿದೆ ಎಂದು ಮಾಲಕರಾದ ರಾಜೇಶ್ ಕಂಡೂರು ಹಾಗೂ ಮೈನಾ ರಾಜೇಶ್ ಕಂಡೂರು ತಿಳಿಸಿದ್ದಾರೆ.

error: Content is protected !!
Scroll to Top