ತೆರೆದ ಬಾವಿಯಲ್ಲಿ ಅಪರಿಚಿತ ಶವ ಪತ್ತೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.10. ನಗರ ಠಾಣಾ ಸರಹದ್ದಿನ ಪುತ್ತೂರು ಕಸಬಾ ಗ್ರಾಮದ ನೆಲ್ಲಿಕಟ್ಟೆ ಖಾಸಗಿ ಬಸ್ಸು ನಿಲ್ದಾಣದ ಹಿಂಬದಿಇರುವ ಮನೆ ನಿವೇಶದ ತೆರೆದ ಬಾವಿಯಲ್ಲಿ ಅಪರಿಚಿತ ಶವವೊಂದು ಶನಿವಾರದಂದು ಕಂಡುಬಂದಿದೆ.

ಬುಧವಾರ ಸಂಜೆಯ ನಂತರ ತೆರೆದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದ್ದು, ಈ ಬಗ್ಗೆ ಸಾಮೆತ್ತಡ್ಕ  ನಿವಾಸಿ ಪರವೀಣ್ ಕುಮಾರ್ ರೈಯವರು ನೀಡಿರುವ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top