ದಾಖಲೆಯತ್ತ ಮುಖ ಮಾಡಿದ ಅಡಿಕೆ ಧಾರಣೆ ➤ ಹೊಸ ಅಡಿಕೆಗೆ 520 ರೂ.!!

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 22. ಅಡಿಕೆ ಬೆಳಗಾರರಲ್ಲಿ ಸಂತಸ ಮನೆ ಮಾಡಿದ್ದು, ಹೊಸ ಅಡಿಕೆ ಧಾರಣೆಯು ದಾಖಲೆ ಹಂತಕ್ಕೆ ತಲುಪಿ ಇದೀಗ ಕ್ಯಾಂಪ್ಕೋ ಮತ್ತು ಹೊರ ಮಾರುಕಟ್ಟೆಯಲ್ಲಿ ದರ ಏರಿಕೆಗೆ ಪೈಪೋಟಿ ಏರ್ಪಟ್ಟಿದೆ.

ಮಂಗಳವಾರದಂದು ಬೆಳ್ಳಾರೆಯ ಹೊರ
ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆಯು ಕೆ.ಜಿ. 515ರಿಂದ 520 ರೂ. ಇದ್ದರೆ ಕ್ಯಾಂಪ್ಕೋದಲ್ಲಿ
ಕೆ.ಜಿ.ಗೆ 500 ರೂ.ಗೆ ಖರೀದಿಯಾಗಿದೆ. ಮಾಸ್‌ ಸಹಕಾರ ಸಂಸ್ಥೆಯಲ್ಲಿ 505 ರೂ. ಧಾರಣೆಯಲ್ಲಿ ಅಡಿಕೆ ಬೆಲೆ ನಿಂತಿದ್ದರೆ ಬೆಳೆಗಾರರು ಇನ್ನೂ ಏರಿಕೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿರುವುದು ಕಂಡುಬಂದಿದೆ.

Also Read  ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 98 ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

 

 

 

error: Content is protected !!
Scroll to Top