ಗ್ಯಾಸ್ ಸೋರಿಕೆಯಿಂದ ಮನೆಯಿಡೀ ವ್ಯಾಪಿಸಿದ ಬೆಂಕಿ ➤ ಮಹಿಳೆಯರಿಬ್ಬರು ಸಜೀವ ದಹನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.21. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅಪಾರ್ಟ್‌ಮೆಂಟ್ ನಲ್ಲಿನ ಎರಡು ಮನೆಗೆ ಬೆಂಕಿ ವ್ಯಾಪಿಸಿದ ಪರಿಣಾಮ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಇಬ್ಬರು ಸಜೀವ ದಹನವಾದ ಘಟನೆ ಬೆಂಗಳೂರಿನ ಹೊರವಲಯದ ದೇವರಚಿಕ್ಕನ ಹಳ್ಳಿಯಲ್ಲಿ ಮಂಗಳವಾರದಂದು ಸಂಭವಿಸಿದೆ.

ದೇವರಚಿಕ್ಕನ ಹಳ್ಳಿಯಲ್ಲಿರುವ ನಾಲ್ಕು ಅಂತಸ್ತಿನ ಅಪಾರ್ಟ್​ಮೆಂಟ್​ನಲ್ಲಿ ಅವಘಡ ಸಂಭವಿಸಿದ್ದು, ಗ್ಯಾಸ್ ಸಿಲಿಂಡರ್ ನ ಪೈಪ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬೆಂಕಿ ಪರಿಸರದಲ್ಲೆಲ್ಲಾ ವ್ಯಾಪಿಸಿದ್ದು, ಈ ವೇಳೆ ಮನೆಯೊಳಗಿದ್ದ ಮಹಿಳೆಯು ವರಾಂಡಕ್ಕೆ ಬಂದು ಸಹಾಯಕ್ಕಾಗಿ ಕೂಗಾಡುತ್ತಿದ್ದ ವೇಳೆ ನೋಡ ನೋಡುತ್ತಲೇ ಸಜೀವ ದಹನವಾಗಿದ್ದಾರೆ. ಘಟನೆಯ ಭೀಕರ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದ್ದು, ಮಹಿಳೆಯ ಕೂದಲಿಗೆ ಬೆಂಕಿ ಹತ್ತಿಕೊಂಡು ಬಳಿಕ ಇಡೀ ಶರೀರ ಕೆನ್ನಾಲಿಗೆಯಲ್ಲಿ ದಹನವಾಗಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ‌

Also Read  ಮಂಗಳೂರು ಸೆನ್ ಕ್ರೈಂ ಠಾಣಾ ಎಎಸ್ಐ ಆಗಿ ಶೀನಪ್ಪ ಪೂಜಾರಿ ಮುಂಭಡ್ತಿ

 

 

 

error: Content is protected !!
Scroll to Top