120 ಕಿಮೀ ಮೈಲೇಜ್ ನೀಡುವ ಇಲೆಕ್ಟ್ರಿಕ್ ಸ್ಕೂಟರ್ ➤ ಕಡಬದ ಪ್ಯೂರ್ ಇವಿ ಯಲ್ಲಿ ಶುಭಾರಂಭದ ಪ್ರಯುಕ್ತ ವಿಶೇಷ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಸೆ.08. ಇಲೆಕ್ಟ್ರಿಕ್ ವಾಹನದಲ್ಲಿ ಕ್ರಾಂತಿಯನ್ನು ಸೃಷ್ಟಿಸಿರುವ ಹೈದರಾಬಾದ್ ಮೂಲದ ಕಂಪೆನಿ ‘ಪ್ಯೂರ್’ ಇದೀಗ ತನ್ನ ಶಾಖೆಯನ್ನು ಕಡಬದಲ್ಲೂ ಪ್ರಾರಂಭಿಸಿದೆ.

ಅತೀ ಕಡಿಮೆ ದರದಲ್ಲಿ ಹೆಚ್ಚು ಚಾಲನಾ ಶಕ್ತಿಯನ್ನು ಹೊಂದಿರುವ ಪ್ಯೂರ್ ಇಲೆಕ್ಟ್ರಿಕಲ್ ವಾಹನಗಳು 4 ಮಾಡೆಲ್ ಗಳಲ್ಲಿ ಲಭ್ಯವಿದ್ದು, 8 ವಿಭಿನ್ನ ಬಣ್ಣಗಳಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಪ್ಯೂರ್ ಇಪ್ಲುಟೋ 7G ಮತ್ತು ಪ್ಯೂರ್ ಇಟ್ರಾನ್ಸ್ neo ಮಾಡೆಲ್ ವಾಹನಗಳು ಒಂದು ಸಲ ಚಾರ್ಜ್ ಮಾಡಿದ್ದಲ್ಲಿ 120 ಕಿಲೋಮೀಟರ್ ಕ್ರಮಿಸಲಿದ್ದು, ಒಂದು ಬಾರಿ ಚಾರ್ಜ್ ಮಾಡಲು 3 ಯುನಿಟ್ ವಿದ್ಯುತ್ ಬಳಕೆಯಾಗಲಿದೆ. ವಾಹನದಲ್ಲೇ ನೇರವಾಗಿ ಚಾರ್ಜಿಂಗ್ ವ್ಯವಸ್ಥೆಯಿದ್ದು, ಜೊತೆಗೆ ಬ್ಯಾಟರಿ ತೆಗೆದು ಚಾರ್ಜ್ ಮಾಡುವ ಅವಕಾಶವನ್ನೂ ನೀಡಲಾಗಿದೆ. ರಿಮೋಟ್ ಕಂಟ್ರೋಲ್ ಸಿಸ್ಟಂ ಹೊಂದಿರುವ ಈ ಇಲೆಕ್ಟ್ರಿಕ್ ದ್ವಿಚಕ್ರ ವಾಹನವು ವಾಟರ್ ಪ್ರೂಫ್ ಹಬ್ ಮೋಟಾರನ್ನು ಹೊಂದಿದೆ. ಫ್ರಂಟ್ ಡಿಸ್ಕ್‌ ಬ್ರೇಕ್ ಹಾಗೂ ರಿಯರ್ ಡ್ರಮ್ ಬ್ರೇಕ್ ಜೊತೆಗೆ ಅತ್ಯುತ್ತಮ ಶಾಕ್ ಅಬ್ಸಾರ್ಬರ್ ನೀಡಲಾಗಿದ್ದು, 150 ಕೆಜಿ ಭಾರ ಹೊರುವ ಸಾಮರ್ಥ್ಯವನ್ನು ಹೊಂದಿದೆ.

Also Read  ಶ್ರೀ ಸಾಯಿಬಾಬಾ ಸ್ಮರಿಸಿ ದಿನಭವಿಷ್ಯ ನೋಡೋಣ

ದೇಶದಲ್ಲೇ ತಯಾರಿಸಿರುವ ಬ್ಯಾಟರಿಯ ಮೇಲೆ 5 ವರ್ಷಗಳ ವಾರಂಟಿಯನ್ನು ನೀಡಲಾಗಿದ್ದು, ರಾಷ್ಟ್ರೀಕೃತ ಬ್ಯಾಂಕ್, ಎಸ್ಸಿಡಿಸಿಸಿ ಬ್ಯಾಂಕ್ ಹಾಗೂ ಕೋ-ಆಪರೇಟಿವ್ ಸೊಸೈಟಿಗಳಲ್ಲಿ ಸಾಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9481713821 ಸಂಖ್ಯೆಯನ್ನು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top