ಒಂಭತ್ತನೇ ವರ್ಷಕ್ಕೆ ಪಾದಾರ್ಪಣೆ ಹಿನ್ನೆಲೆ ➤ ಕಡಬದ ನಾಡೋಳಿ ಡಯಾಗ್ನಾಸ್ಟಿಕ್ ನಲ್ಲಿ ಉಚಿತ ಮಧುಮೇಹ ತಪಾಸಣೆ

(ನ್ಯೂಸ್ ಕಡಬ) newskadaba.com ಕಡಬ, ಸೆ.02. ಇಲ್ಲಿನ ಫೆಡರಲ್ ಬ್ಯಾಂಕ್ ಹಿಂಭಾಗದಲ್ಲಿ ಕಳೆದ ಎಂಟು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ನಾಡೋಳಿ ಡಯಾಗ್ನಾಸ್ಟಿಕ್ ಸೆಂಟರ್ ಇಂದು ಒಂಭತ್ತನೆಯ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಉಚಿತ ಮಧುಮೇಹ ತಪಾಸಣೆ ನಡೆಯಲಿದೆ.

ನಾಡೋಳಿ ಡಯಾಗ್ನಸ್ಟಿಕ್ ಸೆಂಟರ್ ತನ್ನ ಎಂಟು ವರುಷಗಳ ಸೇವೆಯನ್ನು ಪೂರೈಸಿ ಒಂಭತ್ತನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಇನ್ನೂ ಹೆಚ್ಚಿನ ಸೇವೆ ನೀಡುವ ಉದ್ದೇಶದಿಂದ ಸದ್ಯದಲ್ಲೇ ಎಕ್ಸ್‌-ರೇ ಸೇವೆ ಆರಂಭಗೊಳ್ಳಲಿದೆ. ಅಲ್ಲದೇ ಈಗಾಗಲೇ ವಾರದ ವಿವಿಧ ದಿನಗಳಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ, ಕಿಡ್ನಿ, ಲಿವರ್ ಸಂಬಂಧಿತ ರೋಗಗಳ ತಜ್ಞ ವೈದ್ಯ ಡಾ. ನರಸಿಂಹ ಶಾಸ್ತ್ರಿ, ಮೂಳೆ ಮತ್ತು ಗಂಟು ನೋವಿನ ತಜ್ಞ ವೈದ್ಯ ಡಾ.ಅಭೇಯ್ ವಾಸುದೇವನ್ ಹಾಗೂ ಕಿವಿ, ಮೂಗು ಮತ್ತು ಗಂಟಲು ತಜ್ಞ ವೈದ್ಯ ಡಾ.ಹರ್ಷ ತುಳುಪುಳೆ ಸಾರ್ವಜನಿಕ ಸೇವೆಗೆ ಲಭ್ಯವಿರಲಿದ್ದು, ಹೆಚ್ಚಿನ ಮಾಹಿತಿಗಾಗಿ 9380 283 269 ಅಥವಾ 9620 438 244 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಕಾರು ಮತ್ತು ಬೈಕ್ ನಡುವೆ ಡಿಕ್ಕಿ

 

error: Content is protected !!
Scroll to Top