ತಾಯಿ-ಮಗಳಿಂದಲೇ ಹನಿ ಟ್ರ್ಯಾಪ್ ದಂಧೆ ➤ ಖತರ್ನಾಕ್ ಗ್ಯಾಂಗ್ ನ ಹೆಡೆಮುರಿ ಕಟ್ಟಿದ ಪೊಲೀಸರು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಆ.19. ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಗ್ಯಾಂಗ್ ವೊಂದನ್ನು ಜನನಬಂಧಿಸಿರುವ ಚಿಕ್ಕಮಗಳೂರು ಪೊಲೀಸರು ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತ ವರ್ಗದವರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ತಂಡ ಆ ಬಳಿಕ ಮನೆಗೆ ಕರೆಸಿ ಮೋಸದ ಬಲೆಗೆ ಬೀಳಿಸಿ ನಗ್ನ ವಿಡಿಯೋ ಮಾಡಿಕೊಂಡು ಯಾಮಾರಿಸುತ್ತಿದ್ದರು. ತಾಯಿ, ಮಗಳು ಸೇರಿದಂತೆ 6 ಮಹಿಳೆಯರು ಹಾಗೂ ಏಳು ಪುರುಷರು ಮೋಸದಿಂದ ಹನಿಟ್ರ್ಯಾಪ್ ನಡೆಸಿ ವಂಚಿಸುತ್ತಿದ್ದರು ಎಂದು ತಿಳಿದುಬಂದಿದೆ. ಇವರಿಂದ ಮೋಸ ಹೋದ ವ್ಯಕ್ತಿಯೋರ್ವರು ಚಿಕ್ಕಮಗಳೂರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು 13 ಮಂದಿಯ ಖತರ್ನಾಕ್ ಗ್ಯಾಂಗನ್ನು ಬಂಧಿಸಿದ್ದಾರೆ.

Also Read  ಮೂಡುಬಿದಿರೆ: ಫೇಸ್ ಬುಕ್ ನಲ್ಲಿ ಜೈನ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ➤ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮನವಿ

 

 

 

error: Content is protected !!
Scroll to Top