ಕಡಬ: ಪೊಲೀಸ್ ಠಾಣೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆ. 15. 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಎಲ್ಲೆಡೆ ಆಚರಿಸಲಾಗುತ್ತಿದ್ದು, ದ.ಕ.ಜಿಲ್ಲಾಡಳಿತದ ಆದೇಶದಂತೆ ಕಡಬ ಪೊಲೀಸ್ ಠಾಣೆಯಲ್ಲೂ ಸರಳವಾಗಿ ಆಚರಿಸಲಾಯಿತು.


ಠಾಣಾ ಎಸ್.ಐ ರುಕ್ಮ ನಾಯಕ್ ಧ್ವಜರೋಹಣಗೈದರು. ಈ ಸಂದರ್ಭದಲ್ಲಿ ಶಾಂತಿ ಮತ್ತು ಕಾನೂನು ಪಾಲನೆಗಾಗಿ ಹಗಳಿರುಳು ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಸೇವೆಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೇ ಹಿರಿಯ ಹೋರಾಟಗಾರರ ತ್ಯಾಗ ಬಲಿದಾನದ ಫಲವಾಗಿ ನಮಗೆ ಸ್ವಾತಂತ್ರ ಸಿಕ್ಕಿದೆ, ಇಂದು ಭಾರತಾಂಬೆಯ ಜನ್ಮದಿನ ಜನತೆಗೆ ಹೊಸ ಚೈತನ್ಯ ತರಲಿ ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಎಸ್ಐಗಳಾದ ಸುರೇಶ್, ಚಂದ್ರಶೇಖರ್, ಹೆಡ್ ಕಾನ್ಸ್‌ಟೇಬಲ್ ಗಳಾದ ನೇತ್ರಾ ಕುಮಾರ್, ಶಿವಪ್ರಸಾದ್, ಚಂದ್ರ ಶೇಖರ್ ಮೊದಲಾದವರು ಉಪಸ್ಥಿತರಿದ್ದರು.

Also Read  ಸಿದ್ದರಾಮಯ್ಯ ಮತ್ತು ಡಿಕೆಶಿ ನನ್ನ ಎರಡು ಕಣ್ಣುಗಳಿದ್ದ ಹಾಗೆ..!➤ಶಾಸಕ ಪ್ರದೀಪ್ ಈಶ್ವರ್

 

 

 

 

 

 

 

error: Content is protected !!
Scroll to Top