ಪೋಷಕರು ಮದುವೆಗೆ ಒತ್ತಾಯಿಸಿದರೆಂದು ತನ್ನ ಮರ್ಮಾಂಗವನ್ನೇ ಕತ್ತರಿಸಿದ ಯುವಕ

(ನ್ಯೂಸ್ ಕಡಬ) Newskadaba.com ತಮಿಳುನಾಡು, ಜು. 02. ಮದುವೆಯಾಗಲು ಪೋಷಕರು ಒತ್ತಾಯ ಮಾಡಿದರೆಂದು ಯುವಕನೋರ್ವ ತನ್ನ ಮರ್ಮಾಂಗವನ್ನೇ ಕತ್ತರಿಸಿ ಆತ್ಮಹತ್ಯೆಗೆತ್ನಿಸಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯ ತಮ್ಮಂಪಟ್ಟಿ ಎಂಬಲ್ಲಿ ನಡೆದಿದೆ.

ಯುವಕನನ್ನು ವಿಜಯರಾಘವನ್ ಎಂದು ಗುರುತಿಸಲಾಗಿದೆ. ಇವನಿಗೆ ಮದುವೆ ಮಾಡಿಕೊಳ್ಳುವಂತೆ ಪೋಷಕರು ಒತ್ತಾಯ ಹೇರಿದ್ದರು. ಈ ಹಿನ್ನೆಲೆ ಮನೆಯಲ್ಲಿ ಜಗಳ ಮಾಡಿದ ಈತ ತನ್ನ ಮರ್ಮಾಂಗ ಹಾಗೂ ಕುತ್ತಿಗೆಯನ್ನು ಕತ್ತರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

error: Content is protected !!
Scroll to Top