ಪುತ್ತೂರಿನ ಗಾಂಧಿ ಪ್ರತಿಮೆಗೆ ಅವಮಾನಗೈದ ಕಿಡಿಗೇಡಿಗಳನ್ನು ಶೀಘ್ರ ಬಂಧಿಸಿ ➤ ಕ್ಯಾಂಪಸ್ ಫ್ರಂಟ್

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 02. ಪುತ್ತೂರಿನ ಹೃದಯ ಭಾಗದಲ್ಲಿ ಹಲವಾರು ವರ್ಷಗಳಿಂದಿರುವ ಗಾಂಧಿ ಪ್ರತಿಮೆಯನ್ನು ವಿಕೃತಗೊಳಿಸಿರುವ ಘಟನೆಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತಿದೆ.

ಕಿಡಿಗೇಡಿಗಳು ಗಾಂಧಿ ಪ್ರತಿಮೆಯ ಕನ್ನಡಕ ತೆಗೆದು ಪ್ರತಿಮೆಯ ತಲೆಗೆ ಇಟ್ಟು ಹಾಗೂ ತಲೆಯ ಮೇಲೆ ಟೀ ಶರ್ಟ್ ನ್ನು ಇಟ್ಟು ಗಾಂಧೀಜಿಯನ್ನು ಅವಮಾನಗೊಳಿಸಿದ್ದಾರೆ. ಕಿಡಿಗೇಡಿಗಳನ್ನು ಶೀಘ್ರ ಬಂಧಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ಕೊಡಿಪ್ಪಾಡಿ ಆಗ್ರಹಿಸಿದ್ದಾರೆ.

Also Read  ಬೀದಿಬದಿ ವ್ಯಾಪಾರಿಗಳ ಆರ್ಥಿಕ ಪುನ:ಶ್ಚೇತನಕ್ಕೆ ತುರ್ತು ಸಾಲ ಒದಗಿಸಿ ➤ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ

error: Content is protected !!
Scroll to Top