ಮಂಗಳೂರು: ಜುಲೈ 1ರಿಂದ ಕೆಲವು ಖಾಸಗಿ ಹಾಗೂ ಸಿಟಿ ಬಸ್‌ಗಳ ಸೇವೆ ಆರಂಭ

(ನ್ಯೂಸ್ ಕಡಬ) Newskadaba.com ಮಂಗಳೂರು, ಜೂ. 25. ಜುಲೈ 1 ರಿಂದ ನಿಗದಿತ ಸಂಖ್ಯೆಯ ಖಾಸಗಿ ಹಾಗೂ ಸಿಟಿ ಬಸ್ ಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುವುದು. ಮೂಡುಬಿದ್ರೆಯಲ್ಲಿ ನಡೆದ ಮಾಲೀಕರ ಸಂಘದ ಸಭೆಯಲ್ಲಿ ಹೆಚ್ಚಿನ ಬಸ್‌ ಮಾಲೀಕರು ಬಸ್ ಸೇವೆಗಳನ್ನು ಪ್ರಾರಂಭಿಸಲು ಈ ಸಂದರ್ಭದಲ್ಲಿ ಒಪ್ಪಿಕೊಂಡರು.


ಕೆಲವು ಖಾಸಗಿ ಬಸ್ ಮತ್ತು ಮಂಗಳೂರು ನಗರ ಬಸ್ಸುಗಳು ಜುಲೈ 1 ರಿಂದ ಸೀಮಿತ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ ಎಂದು ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್ ಮತ್ತು ನಗರ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವಾ ಹೇಳಿದ್ದಾರೆ.

Also Read  ಕಡಬ: ರೆಂಜಿಲಾಡಿಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆ ಆನೆ ಶಿಬಿರದಲ್ಲಿ ಸಾವು

error: Content is protected !!
Scroll to Top