ಕಡಬ: ಮನೆಯಿಂದ ಅಡಿಕೆ ಕಳವು ಪ್ರಕರಣ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜೂ.24. ಮನೆಯಲ್ಲಿರಿಸಿದ್ದ ಅಡಿಕೆ ಚೀಲವನ್ನು ಪಕ್ಕದ ಮನೆಯಾತ ಕದ್ದೊಯ್ದ ಘಟನೆ ಠಾಣಾ ವ್ಯಾಪ್ತಿಯ ಹಳೆನೇರಂಕಿ ಎಂಬಲ್ಲಿ ಬುಧವಾರದಂದು ನಡೆದಿದೆ.


ಹಳೆ ನೇರಂಕಿ ಗ್ರಾಮದ ಅಲೆಪ್ಪಾಡಿ ನಿವಾಸಿ ಸುಕೇಶ ಎಂಬವರು ತನ್ನ ಮನೆಯ ಅಂಗಳದಲ್ಲಿ ಎರಡು ಗೋಣಿ ಚೀಲಗಳಲ್ಲಿ ಅಡಿಕೆಯನ್ನು ಇರಿಸಿದ್ದರು ಎನ್ನಲಾಗಿದೆ. ಬುಧವಾರದಂದು ಮನೆಮಂದಿ ತೋಟಕ್ಕೆ ತೆರಳಿದ್ದ ವೇಳೆ ಪಕ್ಕದ ಮನೆಯ ಪರಮೇಶ್ವರ್ ಎಂಬಾತ ಒಂದು ಗೋಣಿ ಚೀಲ ಅಡಿಕೆಯನ್ನು ಎಗರಿಸಿರುವುದಾಗಿ ಸುಕೇಶ ಕಡಬ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಕಡಬ ಠಾಣಾ ಎಸ್ಐ ರುಕ್ಮನಾಯ್ಕ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ‌. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಭವಿತ್, ಚಂದ್ರಶೇಖರ್, ಶ್ರೀಶೈಲ, ಮಹೇಶ್, ದೀಪು ಪಾಲ್ಗೊಂಡಿದ್ದರು.

Also Read  15 ದಿನ ಕೃಷ್ಣನ ದರ್ಶನವಿಲ್ಲ ►ಉಡುಪಿ ಕೃಷ್ಣ ಮಠದಲ್ಲಿ ದೇವರ ದರ್ಶನಕ್ಕೆ ಅವಕಾಶವಿಲ್ಲ

 

 

 

error: Content is protected !!
Scroll to Top