ಮಗುವಿಗೆ “ಸಿದ್ದರಾಮಯ್ಯ” ಎಂದು ನಾಮಕರಣ ಮಾಡಿದ ಮಾಜಿ ಸಿಎಂ ಅಭಿಮಾನಿ

(ನ್ಯೂಸ್ ಕಡಬ) newskadaba,ಕೊಪ್ಪಳ ಜೂ.24: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಟ್ಟಾಭಿಮಾನಿಯಾಗಿರುವ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪುರದ ರೈತ ಮಂಜುನಾಥ ಹಾಗು ಪತ್ನಿ ನೇತ್ರಾವತಿಯವರ ಮೊದಲು ಮಗುವಿಗೆ ಸಿದ್ದರಾಮಯ್ಯ ಎಂದು ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿದರು. ಮಂಜುನಾಥನಿಗೆ ಸಿದ್ದರಾಮಯ್ಯ ಬಗ್ಗೆ ಎಲ್ಲಿಲ್ಲದ ಅಭಿಮಾನ, ಅವರ ಅನ್ನಭಾಗ್ಯ, ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳಿಂದಾಗಿ ಅವರ ಅಭಿಮಾನಿಯಾಗಿರುವ ಅವರು ತಮಗೆ ಮಗನಿಗೆ ಸಿದ್ದರಾಮಯ್ಯ ಎಂಬ ಹೆಸರಿಡಬೇಕೆಂದು ನಿಶ್ಚಿಯಿಸಿಕೊಂಡಿದ್ದು, ಅದರಂತೆ ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದಾರೆ.

ಸಿದ್ದರಾಮಯ್ಯ ಎಂಬ ಹೆಸರನ್ನು ನಾಮಕರಣ ಮಾಡಿದ ಮಂಜುನಾಥ ದಂಪತಿಗಳು ಇಂದು ಬಂದು ಭಾಂದವರಿಗೆ ಭರ್ಜರಿ ಊಟ ಹಾಕಿಸಿದರು, ಸಾಮಾನ್ಯವಾಗಿ ಬಹುತೇಕರು ತಮ್ಮ ಮಕ್ಕಳಿಗೆ ದೇವರು ಹೆಸರಿಡುತ್ತಾರೆ. ಇನ್ನೂ ಕೆಲವರು ಮಾತಿಗೆ ಇಂಥವರ ಹೆಸರು ನಮ್ಮ ಮಕ್ಕಳಿಗೆ ಹೆಸರಿಡಬೇಕು ಎನ್ನುತ್ತಾರೆ ಅದೇ ರೀತಿ ಮಂಜುನಾಥ ತಮ್ಮ ಮೊದಲು ಮಗನಿಗೆ ಸಿದ್ದರಾಮಯ್ಯ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ.

Scroll to Top