ಖ್ಯಾತ ನಟಿ ರಶ್ಮಿಕಾ ಮಂದಣ್ಣರನ್ನು ಕಾಣುವ ಹಂಬಲ..‼️ ➤ ತೆಲಂಗಾಣದಿಂದ ಮಡಿಕೇರಿಗೆ ಬಂದ ಹುಚ್ಚು ಅಭಿಮಾನಿ

(ನ್ಯೂಸ್ ಕಡಬ) newskadaba.com ಮಡಿಕೇರಿ, ಜೂ.23. ತನ್ನ ನೆಚ್ಚಿನ ಸಿನಿಮಾ ತಾರೆಯನ್ನು ಮಾತನಾಡಿಸಬೇಕೆಂಬ ಹಂಬಲದಿಂದ ನೆರೆಯ ತೆಲಂಗಾಣ ರಾಜ್ಯದ ಹುಚ್ಚು ಅಭಿಮಾನಿಯೋರ್ವ ಕರ್ನಾಟಕಕ್ಕೆ ಆಗಮಿಸಿದ ಘಟನೆ ಮಡಿಕೇರಿಯಿಂದ ವರದಿಯಾಗಿದೆ.

ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡತಿ, ಮಡಿಕೇರಿಯ ವಿರಾಜಪೇಟೆ ನಿವಾಸಿ ರಶ್ಮಿಕಾ ಮಂದಣ್ಣ ಅಪಾರ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಇಲ್ಲೋರ್ವ ತೆಲಂಗಾಣ ನಿವಾಸಿ ಆಕಾಶ್ ತ್ರಿಪಾಠಿ ಎಂಬ ಹುಚ್ಚು ಅಭಿಮಾನಿ ರಶ್ಮಿಕಾ ಮಂದಣ್ಣ ಅವರನ್ನು ನೋಡಬೇಕೆಂಬ ತವಕದಿಂದ ಮಡಿಕೇರಿ ಕಡೆಗೆ ಹೆಜ್ಜೆ ಹಾಕಿದ್ದಾನೆ. ತೆಲಂಗಾಣದಿಂದ ಮೈಸೂರಿಗೆ ರೈಲು ಹತ್ತಿ ಬಂದು, ಅಲ್ಲಿಂದ ಗೂಡ್ಸ್ ಮೂಲಕ ವಿರಾಜಪೇಟೆ ತಲುಪಿದ್ದಾನೆ. ಆದರೆ ತನ್ನ ನೆಚ್ಚಿನ ನಟಿಯ ಮನೆ ಯಾವುದು ಎಂದು ತಿಳಿಯದೆ ಎಲ್ಲೆಂದರಲ್ಲಿ ಸುತ್ತಾಡಿದ್ದಾನೆ.

Also Read  ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗಶೆಟ್ಟಿ ವಿಧಿವಶ..!

ಅಪರಿಚಿತ ವ್ಯಕ್ತಿಯೋರ್ವ ಅನುಮಾನಸ್ಪದವಾಗಿ ತಿರುಗಾಡುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆಕಾಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ನಟಿಯನ್ನು ಭೇಟಿಯಾಗಲು ಬಂದಿರುವ ವಿಚಾರ ತಿಳಿದುಬಂದಿದೆ. ಬಳಿಕ ಲಾಕ್‍ಡೌನ್ ನಲ್ಲಿ ಹೊರಗಡರ ಬರಬಾರದೆಂದು ಬುದ್ದಿ ಹೇಳಿ ತೆಲಂಗಾಣಕ್ಕೆ ವಾಪಸ್ ಕಳುಹಿಸಿಕೊಟ್ಟಿದ್ದಾರೆ.

 

 

 

error: Content is protected !!
Scroll to Top