(ನ್ಯೂಸ್ ಕಡಬ) newskadaba.com ಕಡಬ, ಜೂ.22. ಲಾಕ್ ಡೌನ್ ಸಂದರ್ಭವನ್ನು ಸದುಪಯೋಗ ಪಡಿಸಿಕೊಳ್ಳುತ್ತಿರುವ ಯುವಕರು ಕೆಟ್ಟು ಹೋಗಿರುವ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸುವ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಪ್ರಸಿದ್ದ ಕ್ಷೇತ್ರ ನಾಕೂರುಗಯವನ್ನು ಸಂಪರ್ಕಿಸುವ ಪುಳಿಕುಕ್ಕು ನಾಕೂರುಗಯ ರಸ್ತೆಯನ್ನು ಭಾನುವಾರದಂದು ಅಲ್ಲಿನ ಸ್ಥಳೀಯ ಯುವಕರು ಶ್ರಮದಾನದ ಮೂಲಕ ದುರಸ್ತಿಗೊಳಿಸಿದರು. ರಸ್ತೆ ದುರಸ್ತಿ ಹಾಗೂ ರಸ್ತೆ ಅಂಚಿನಲ್ಲಿರುವ ಗಿಡಗಂಟಿಗಳನ್ನು ಕಡಿಯಲಾಯಿತು. ಈ ಸಂದರ್ಭದಲ್ಲಿ ಪುರುಷೋತ್ತಮ ಜಿ, ಮನೀಶ್ ಪಿ, ಯತೀಶ್ ಪಿ, ಹರೀಶ್ ಪಿ, ಹರೀಶ್ ಕೆ, ಕೇಶವ ಡಿ, ಕೇಶವ ಎಂ. ಮೋಹನ್ ಪಿ, ಧನ್ಯರಾಜ್ ಜಿ, ದೀಪಕ್ ಡಿ, ದಯಾನಂದ ಪಿ, ಪ್ರಸಾದ್ ಪಿ, ಚರಣ್ ಜಿ, ಚೋಮ ಬಿ, ಪದ್ಮನಾಭ ಪಿ, ರಾಮಚಂದ್ರ ಪಿ, ಕಾರ್ತೀಕ್ ಡಿ ಮೊದಲಾದವರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.